Thursday, June 4, 2026
Homeತಾಜಾ ಸುದ್ದಿಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿ ಬಿದ್ದ ಪೊಲೀಸ್ ಪೇದೆ

ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿ ಬಿದ್ದ ಪೊಲೀಸ್ ಪೇದೆ

- Advertisement -
- Advertisement -

ಹುಬ್ಬಳ್ಳಿ: ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಪೊಲೀಸ್ ಪೇದೆ ಸಿಕ್ಕಿ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಮಣಿಕಂಠ ಬಂಧಿತ ಪೇದೆಯಾಗಿದ್ದು, ಈತ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕೆಎಲ್‍ಇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪತ್ತೆಯಾಗಿದ್ದಾನೆ.

ಇನ್ನು ಚಿತ್ರದುರ್ಗದಲ್ಲೂ ನಕಲಿ ಅಭ್ಯರ್ಥಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ.ಗೋಕಾಕ್ ಮೂಲದ ಸಿದ್ಧಾರೂಢ ಪೊಲೀಸರಿಗೆ ಸಿಕ್ಕಿ ಬಿದ್ದ ನಕಲಿ ಅಭ್ಯರ್ಥಿ. ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ವ್ಯಕ್ತಿ ಪರೀಕ್ಷೆಗೆ ಹಾಜರು ಹಿನ್ನೆಲೆ ಎಸ್‍ಪಿ ಜಿ.ರಾಧಿಕಾ ನೇತೃತ್ವದಲ್ಲಿ ನಕಲಿ ಅಭ್ಯರ್ಥಿಯ ವಿಚಾರಣೆ ನಡೆಸಲಾಗಿದೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!