Thursday, July 16, 2026
Homeತಾಜಾ ಸುದ್ದಿಬಂಟ್ವಾಳದಲ್ಲಿ ಹೆರಿಗೆ ಬಳಿಕ ತಾಯಿ ಮಗು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

ಬಂಟ್ವಾಳದಲ್ಲಿ ಹೆರಿಗೆ ಬಳಿಕ ತಾಯಿ ಮಗು ಸಾವು: ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ ಕುಟುಂಬಸ್ಥರ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಚೊಚ್ಚಲ ಹೆರಿಗೆ ಬಳಿಕ ತಾಯಿ-ಮಗು ಸಾವನ್ನಪ್ಪಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ರಾಮನಗರ ನಿವಾಸಿ ಗರ್ಭಿಣಿ ಕಾಜಲ್ ಅವರನ್ನ ಹೆರಿಗೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಹೆರಿಗೆ ಬಳಿಕ ಮಗು ಸಾವನ್ನಪ್ಪಿತ್ತು. ಅಧಿಕ ರಕ್ತಸ್ರಾವವಾದ ಕಾರಣ ಕಾಜಲ್ ಅವರನ್ನ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ವೈದ್ಯರು ಕಾಜಲ್ ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಕಾಜಲ್ ಸಾವನ್ನಪ್ಪಿದ್ದಾರೆಂದು ಆರೋಪಿಸಿದ ಕುಟುಂಬಸ್ಥರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದರು. ಆಸ್ಪತ್ರೆ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!