Friday, June 5, 2026
Homeಕರಾವಳಿಮಂಗಳೂರು: ಅಶ್ಲೀಲ ಚಿತ್ರ ಸಂಗ್ರಹಿಸಿ ಬೆದರಿಕೆ ಕರೆ, ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ಅಶ್ಲೀಲ ಚಿತ್ರ ಸಂಗ್ರಹಿಸಿ ಬೆದರಿಕೆ ಕರೆ, ಆರೋಪಿಗಳಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಮಂಗಳೂರು: ಫೇಸ್ಬುಕ್ ನಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ನಗರದ ಕೆಪಿಟಿಯ ವ್ಯಕ್ತಿಯನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಗೋಕುಲ್ ರಾಜ್ (20 ವ) ಮತ್ತು ಪವನ್ ಎಲ್. (20 ವ) ಬಂಧಿತರು. ಇವರಿಬ್ಬರೂ ಬೆಂಗಳೂರು ನಿವಾಸಿಗಳಾಗಿದ್ದಾರೆ.

ಆರೋಪಿಗಳು ಸಾಕ್ಷೀರಾಜ್ ಎಂಬ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಸೃಷ್ಟಿಸಿ ಮಂಗಳೂರಿನ ರಾಜೇಶ್ ಎಂಬವರೊಂದಿಗೆ ಸಂಪರ್ಕ ಸಾಧಿಸಿದ್ದರು. ನಂತರ ರಾಜೇಶ್ ರಿಗೆ ಮೆಸೇಜ್ ಮಾಡಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ರವಾನಿಸಿದ್ದರು. ಅಲ್ಲದೆ, ರಾಜೇಶ್ ಅವರಲ್ಲೂ ತಮ್ಮ ಅಶ್ಲೀಲ ಫೋಟೊ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯೇ ಇರಬೇಕೆಂದು ನಂಬಿ ರಾಜೇಶ್ ತನ್ನ ಅಶ್ಲೀಲ ಫೋಟೊಗಳನ್ನೂ ಫೇಸ್ಬುಕ್ ಮೆಸೆಂಜರ್ ಮೂಲಕ ರವಾನಿಸಿದ್ದಾರೆ.

ನಂತರ ತನ್ನ ಅಸಲಿ ರೂಪ ತೋರ್ಪಡಿಸಿದ ಆರೋಪಿಗಳು ಫೋಟೊಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ರಾಜೇಶ್ ಅವರಿಂದ ಹಣ ಪೀಕಿಸಿದ್ದಾರೆ. ಇದರಿಂದ ಬೆಸತ್ತ ರಾಜೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಬಿ.ಸಿ.ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!