Friday, March 29, 2024
Homeಕ್ರೀಡೆBIG NEWS: ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ವಿಧಿವಶ

BIG NEWS: ಫುಟ್ಬಾಲ್‌ ದಂತಕಥೆ ಡಿಯಾಗೋ ಮರಡೋನಾ ವಿಧಿವಶ

spot_img
- Advertisement -
- Advertisement -

ಫುಟ್ಬಾಲ್‌ ದಂತ ಕಥೆ, ಕೋಟ್ಯಾಂತರ ಕ್ರೀಡಾಭಿಮಾನಿಗಳ ಆರಾಧ್ಯ ದೈವ ಅರ್ಜೈಂಟಿನಾದ ಡಿಯಾಗೋ ಮರಡೋನಾ ವಿಧಿವಶರಾಗಿದ್ದಾರೆ.

60 ವರ್ಷದ ಮರಡೋನಾ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಡಿಯಾಗೋ ಮರಡೋನಾ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಇದೀಗ ಹಠಾತ್‌ ನಿಧನರಾಗುವ ಮೂಲಕ ಬಾರದ ಲೋಕಕ್ಕೆ ತೆರಳಿದ್ದಾರೆ.

1986 ರ ಫುಟ್ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದಲ್ಲಿದ್ದ ಮರಡೋನಾ ಅವರಿಗೆ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದರು. 2018 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಮರಡೋನಾ ಈ ಸಂದರ್ಭದಲ್ಲಿ 2008 ರಲ್ಲಿ ಕೋಲ್ಕತ್ತಾಗೆ ಭೇಟಿ ನೀಡಿದ್ದನ್ನು ಮೆಲುಕು ಹಾಕಿದ್ದರು. ಫುಟ್ಬಾಲ್‌ ನಿಂದ ನಿವೃತ್ತಿಗೊಂಡ ಬಳಿಕ ಅರ್ಜೈಂಟಿನಾದ ಮುಖ್ಯ ಕೋಚ್‌ ಆಗಿಯೂ ಮರಡೋನಾ ಕಾರ್ಯ ನಿರ್ವಹಿಸಿದ್ದರು.

ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದರಿಂದ ತಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಏರುಪೇರು ಅನುಭವಿಸಿದರು. 1982ರಲ್ಲಿ ಮಾದಕ ದ್ರವ್ಯ ವಸ್ತುಗಳನ್ನ ಸೇವನೆ ಮಾಡಿ ಸಿಕ್ಕಿಹಾಕಿಕೊಂಡರು. 1991ರಲ್ಲೂ ಸಿಕ್ಕಿಬಿದ್ದರು. ಇದರಿಂದ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದರು. ಅಲ್ಲದೇ 1994ರ ಫುಟ್​ಬಾಲ್ ವಿಶ್ವಕಪ್​​ನಲ್ಲಿ ಡ್ರಗ್ಸ್​ ಸೇವಿಸಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನ ಮನೆಗೆ ಕಳುಹಿಸಲಾಗಿತ್ತು.

ಅಂದ್ಹಾಗೆ ಮರಡೋನಾ 1983ರಲ್ಲಿ ಸ್ಪೇನ್​ಗೆ ತೆರಳಿದ್ದರು. ಅಲ್ಲಿಂದ ದುಶ್ಚಟಗಳಿಗೆ ದಾಸರಾಗಿದ್ದರು ಅಂತಾ ಹೇಳಲಾಗುತ್ತದೆ. ಒಮ್ಮೆ ಮಾದಕ ವಸ್ತುಗಳಿಗೆ ಅಡಿಕ್ಟ್​ ಆದ ಮರಡೋನಾ ಅವರು, ಅದರಿಂದ ಹೊರ ಬರಲಾಗದೇ ಪರದಾಡಿದರು. ಇದರ ಪರಿಣಾಮ ಇತ್ತೀಚೆಗಿನ ದಿನಗಳಲ್ಲಿ ಅವರ ತೂಖ 130 ಕೆಜಿಯಿಂದ ವಿಪರೀತ ಏರಿಕೆ ಕಂಡಿತ್ತು. ಇದರ ಪರಿಣಾಮ ಆರೋಗ್ಯ ಸಮಸ್ಯೆಯನ್ನ ಎದುರಿಸಿದ್ದರು ಎನ್ನಲಾಗಿದೆ.

- Advertisement -
spot_img

Latest News

error: Content is protected !!