Wednesday, June 3, 2026
Homeತಾಜಾ ಸುದ್ದಿಮುಂದಿನ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಹೆಚ್ಚು ಲೀಡ್ ಪಡೆಯದಿದ್ದರೆ ನಾನು ಶಿರಚ್ಛೇದನ ಮಾಡಿಕೊಳ್ಳುವೆ! ; ಮಾಜಿ ಸಂಸದ...

ಮುಂದಿನ ಚುನಾವಣೆಯಲ್ಲಿ ನಾಗಮಂಗಲದಲ್ಲಿ ಹೆಚ್ಚು ಲೀಡ್ ಪಡೆಯದಿದ್ದರೆ ನಾನು ಶಿರಚ್ಛೇದನ ಮಾಡಿಕೊಳ್ಳುವೆ! ; ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸವಾಲು

- Advertisement -
- Advertisement -

ಮಂಡ್ಯ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲದಲ್ಲಿ ನಾನು ಅತೀ ಹೆಚ್ಚು ಲೀಡ್ ತೆಗೆದುಕೊಳ್ಳದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ. ‌

ನಾಗಮಂಗಲದಲ್ಲಿ ಮೂರು ಜನ ಪಕ್ಷೇತರರಾಗಿ ಸ್ಪರ್ಧೆ ಮಾಡೋಣ,
ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತು ಶಾಸಕ ಸುರೇಶ್ ಗೌಡ ಅವರಿಗೆ ಶಿವರಾಮೇಗೌಡ ಸವಾಲು ಹಾಕಿದ್ದಾರೆ.

ಮದ್ದೂರು ತಾಲ್ಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾತನಾಡಿರುವ ಶಿವರಾಮೇಗೌಡ, ಸುರೇಶ್ ಗೌಡ ಮತ್ತು ಚಲುವರಾಯಸ್ವಾಮಿ ಇಬ್ಬರು ಪಕ್ಷಗಳ ಅಭ್ಯರ್ಥಿಗಳಾಗದೇ ಇದ್ದರೆ ನಾಗಮಂಗಲ
ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಫರ್ಧಿಸಲಿ,
ನಾಗಮಂಗಲದಲ್ಲಿ ನಾನೇ ಲೀಡ್ ನಲ್ಲಿ ಗೆಲ್ಲುತ್ತೇನೆ, ಪಾರ್ಟಿ ಚಿಹ್ನೆ ಮೇಲೆ ನೀವೇನು ಗೆಲ್ಲೋದು ಯಾರು ಬೇಕಾದರೂ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಂಡ್ಯ ಜಿಲ್ಲೆಯ ಕೆಲ ಭಟ್ಟಂಗಿಗಳಿಂದ ಜೆಡಿಎಸ್ ಭದ್ರಕೋಟೆ ಕುಸಿಯುತ್ತಿದೆ‌ ಎಂದೂ ಎಲ್.‌ಆರ್. ಶಿವರಾಮೇಗೌಡ ಹೇಳಿದ್ದಾರೆ.

- Advertisement -

Latest News

error: Content is protected !!