Thursday, June 4, 2026
Homeತಾಜಾ ಸುದ್ದಿಅತಿಯಾದ ಟ್ರಾಫಿಕ್ ರೂಲ್ಸ್ ಬ್ರೇಕ್: ಖುದ್ದು ತಾವೇ ರಸ್ತೆಗಳಿದು ದಂಡ ಹಾಕಿದ ನ್ಯಾಯಾಧೀಶರು!

ಅತಿಯಾದ ಟ್ರಾಫಿಕ್ ರೂಲ್ಸ್ ಬ್ರೇಕ್: ಖುದ್ದು ತಾವೇ ರಸ್ತೆಗಳಿದು ದಂಡ ಹಾಕಿದ ನ್ಯಾಯಾಧೀಶರು!

- Advertisement -
- Advertisement -

ತುಮಕೂರು: ಗುಬ್ಬಿ ಪಟ್ಟಣದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಅತಿಯಾದ ಕಾರಣ ಖುದ್ದು ನ್ಯಾಯಾಧೀಶರೇ ರಸ್ತೆಗಿಳಿದು ದಂಡ ಹಾಕಿದ್ದಾರೆ. ‌

ಪೊಲೀಸರ ಅಸಹಾಯಕತೆ ಕಂಡು ಗುಬ್ಬಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳ ಹುಂಡಿ ಶಿವಪ್ಪ ಖುದ್ದು ರಸ್ತೆಗಿಳಿದು ದಂಡ ಹಾಕಿದ್ದಾರೆ.

ರಸ್ತೆಯಲ್ಲಿ ನಿಂತು ಅಪ್ರಾಪ್ತ ಬೈಕ್ ಸವಾರರನ್ನು ಹಿಡಿದು ನ್ಯಾಯಾಧೀಶರು ದಂಡ ಹಾಕಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ದಿನ ಬೆಳಗಾದ್ರೆ ವಾಹ‌ನ ಸವಾರರು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಿದ್ದು,
ಮಕ್ಕಳ ಕೈಗೆ ಬೈಕ್ ಮತ್ತು ಕಾರ್ ಗಳನ್ನು ಪೋಷಕರು ಕೊಡುತ್ತಿದ್ದಾರೆ.

ಮಕ್ಕಳು ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತಿದ್ದ ಕಾರಣ
ಅಪಘಾತಗಳ ಸಂಖ್ಯೆ ಹೆಚ್ಚಳವಾಗಿತ್ತು.

- Advertisement -

Latest News

error: Content is protected !!