Thursday, June 25, 2026
Homeತಾಜಾ ಸುದ್ದಿಧಮ್, ತಾಕತ್ ಇದ್ರೆ ಪೆನ್ ಡ್ರೈವ್ ನಲ್ಲಿರುವುದು ಬಹಿರಂಗಪಡಿಸಿ: ಮಾಜಿ ಸಿಎಂ ಕುಮಾರಸ್ವಾಮಿಗೆ ಮಾಜಿ ಸಿಎಂ...

ಧಮ್, ತಾಕತ್ ಇದ್ರೆ ಪೆನ್ ಡ್ರೈವ್ ನಲ್ಲಿರುವುದು ಬಹಿರಂಗಪಡಿಸಿ: ಮಾಜಿ ಸಿಎಂ ಕುಮಾರಸ್ವಾಮಿಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಸವಾಲು

- Advertisement -
- Advertisement -

ಚಿಕ್ಕಬಳ್ಳಾಪುರ: ಧಮ್ ಮತ್ತು ತಾಕತ್ ಇದ್ದರೆ ಪೆನ್ ಡ್ರೈವ್ ನಲ್ಲಿ ಏನಿದೆ ಅಂತಾ ಬಹಿರಂಗಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಿಎಂ ಎಂ. ವೀರಪ್ಪ ಮೊಯಿಲಿ ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಮೊಯಿಲಿ,
ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತು ಕುಮಾರಸ್ವಾಮಿ ಹತಾಶರಾಗಿದ್ದಾರೆ, ಎಚ್ಡಿಕೆ ಸಿಎಂ ಆಗಿದ್ದಾಗಿನ ದಾಖಲೆ ಪೆನ್ ಡ್ರೈವ್ ನಲ್ಲಿ ಇರಬೇಕು ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಲ್ಲ ಎಂದು ಹೇಳಿರುವ ವೀರಪ್ಪ ಮೊಯಿಲಿ, ತಪ್ಪಿನಲ್ಲಿ ಸಿಲುಕಿಸಲು ಬಿಜೆಪಿ ಮತ್ತು ಜೆಡಿಎಸ್ ಯತ್ನಿಸುತ್ತಿವೆ ಅವರ ಕನಸು ಈಡೇರುವುದಿಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಅಷ್ಟೆ ಎಂದು ಮಾಜಿ ಸಿಎಂ ಮೊಯಿಲಿ ಹೇಳಿದ್ದಾರೆ.

- Advertisement -

Latest News

error: Content is protected !!