Saturday, May 11, 2024
Homeಕರಾವಳಿಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣ: ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ...

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣ: ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಕಚೇರಿಗೆ ಹಾಜರಾಗಲು ನೋಟಿಸ್ ಜಾರಿ

spot_img
- Advertisement -
- Advertisement -

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಬಿದಿಗೆ ಬಿದ್ದಿರುವ ವಿಚಾರ ಇದೀಗ ಬಹಿರಂಗವಾಗಿದ್ದು. ಪಕ್ಷದ ಅಭ್ಯರ್ಥಿಯ ಸೋಲಿಗೆ ನೇರ ಕಾರಣವಾಗಿರುವ ಬೆಳ್ತಂಗಡಿಯ ಮೂವರು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿಯಿಂದ ಅಂತರಿಕ ತನಿಖೆ ನಡೆಸಲು ಖುದ್ದು ಕೆಪಿಸಿಸಿ ಕಚೇರಿಗೆ ಹಾಜರಾಗಲು ನೋಟಿಸ್ ಜಾರಿಯಾಗಿದ್ದು. ಮೂವರಿಗೂ ಉಚ್ಚಾರಣೆಯಾಗುವ ಭಯ ಶುರುವಾಗಿದೆ.

ಕರ್ನಾಟಕ ವಿಧಾನ ಸಭಾ ಚುನಾವಣೆ 2023 ನಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಬಹಿರಂಗ ಪ್ರಚಾರ ಮಾಡದೆ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯು ಸೋಲಲು ಕಾರಣರಾಗಿದ್ದಿರಿ ಎಂದು ಕೆಪಿಸಿಸಿ ಕಚೇರಿಗೆ ಲಿಖಿತ ದೂರು ಬಂದಿದ್ದು. ಈ ಬಗ್ಗೆ ವಿವರಣೆ ಪಡೆಯಲು ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡ , ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಂಜನ್ ಗೌಡ , ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಇವರಿಗೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಶಿಸ್ತು ಕ್ರಮ ಕಮಿಟಿಯ ಅಧ್ಯಕ್ಷ ಕೆ.ರಹಮನ್ ಖಾನ್ ಪತ್ರ ತಲುಪಿದ 7 ದಿನದೊಳಗಾಗಿ ಅಂದರೆ ಜುಲೈ 8 ರಂದು ಬೆಂಗಳೂರು ಕೆಪಿಸಿಸಿ ಕಚೇರಿಗೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದಾರೆ.

ಗಂಗಾಧರ ಗೌಡ , ರಂಜನ್ ಗೌಡ , ಶೈಲೇಶ್ ಕುಮಾರ್ ಈ  ಮೂವರು ಮುಖಂಡರಿಗೂ ಕೆಪಿಸಿಸಿ ಯಿಂದ ತನಿಖೆ ನಡೆಸಿ ಪಕ್ಷದಲ್ಲಿ ಇದ್ದುಕೊಂಡು ಪಕ್ಷದ ವಿರೋಧವಾಗಿ ನಡೆದುಕೊಂಡು ಕಾರಣದಿಂದ ಉಚ್ಚಾಟನೆಯಾಗುವ ಭಯ ಕಾಡುತ್ತಿದೆ.

- Advertisement -
spot_img

Latest News

error: Content is protected !!