Thursday, June 25, 2026
Homeಕರಾವಳಿಉಡುಪಿವಿಧಾನಸಭೆಯಲ್ಲಿ ದೈವಾರಾಧನೆ ವಿಚಾರ ಪ್ರಸ್ತಾಪ:ಪ್ರತಿಭಾ ಕಾರಂಜಿಯಲ್ಲಿ ದೈವದ ಕೋಲ ಪ್ರದರ್ಶನಕ್ಕೆ ಅವಕಾಶ ಆದೇಶ ಕೈಬಿಡಲು ಶಾಸಕ...

ವಿಧಾನಸಭೆಯಲ್ಲಿ ದೈವಾರಾಧನೆ ವಿಚಾರ ಪ್ರಸ್ತಾಪ:ಪ್ರತಿಭಾ ಕಾರಂಜಿಯಲ್ಲಿ ದೈವದ ಕೋಲ ಪ್ರದರ್ಶನಕ್ಕೆ ಅವಕಾಶ ಆದೇಶ ಕೈಬಿಡಲು ಶಾಸಕ ಸುನೀಲ್ ಕುಮಾರ್ ಒತ್ತಾಯ

- Advertisement -
- Advertisement -

ಬೆಂಗಳೂರು: ವಿಧಾ‌ನಸಭೆ ಅಧಿವೇಶನದಲ್ಲಿ ಇಂದು ತುಳುನಾಡಿನ ದೈವಾರಾಧನೆ ವಿಚಾರ ಪ್ರಸ್ತಾಪವಾಗಿದೆ.

ಶೂನ್ಯ ವೇಳೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್,
ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಲ್ಲಿ ದೈವಾರಾಧನೆ, ದೈವದ ಕೋಲ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜನಪದ ನೃತ್ಯಗಳ ಜೊತೆಗೆ ದೈವಾರಾಧನೆ ಕೂಡ ಸೇರಿಸಲಾಗಿದ್ದು ದೈವಾರಾಧನೆ ಪ್ರದರ್ಶನದ ವಸ್ತು ಅಲ್ಲ, ಹೀಗಾಗಿ ಶಿಕ್ಷಣ ಇಲಾಖೆ ಆದೇಶದಲ್ಲಿ ದೈವಾರಾಧನೆ ಮತ್ತು ಕೋಲ ಪ್ರದರ್ಶನಕ್ಕೆ ಅವಕಾಶದ ಆದೇಶ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಸುನೀಲ್ ಕುಮಾರ್ ಪ್ರಸ್ತಾಪಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶದಲ್ಲಿ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

- Advertisement -

Latest News

error: Content is protected !!