Monday, June 8, 2026
Homeತಾಜಾ ಸುದ್ದಿ4 ದಿನಗಳ 'ಸಾರಿಗೆ ನೌಕರ'ರ ಮುಷ್ಕರ ಅಂತ್ಯ: ಇಂದು ಸಂಜೆಯಿಂದ 'ಬಸ್ ಸಂಚಾರ' ಆರಂಭ

4 ದಿನಗಳ ‘ಸಾರಿಗೆ ನೌಕರ’ರ ಮುಷ್ಕರ ಅಂತ್ಯ: ಇಂದು ಸಂಜೆಯಿಂದ ‘ಬಸ್ ಸಂಚಾರ’ ಆರಂಭ

- Advertisement -
- Advertisement -

ಬೆಂಗಳೂರು: ನಾಲ್ಕು ದಿನಗಳ ಸಾರಿಗೆ ನೌಕರರ ಮುಷ್ಕರ ಅಂತ್ಯವಾಗಿದ್ದು, ಸರ್ಕಾರ ಮತ್ತು ಸಾರಿಗೆ ನೌಕರರ ಸಂಘರ್ಷಕ್ಕೆ ತಾತ್ಕಾಲಿಕ ಸಮಾಪ್ತಿ ದೊರಕಿದೆ.

ಫ್ರೀಡಂ ಪಾರ್ಕ್ ನಲ್ಲಿ ಈ ಕುರಿತು ಘೋಷಣೆ ಹೊರಡಿಸಿದ ಕೋಡಿಹಳ್ಳಿ ಚಂದ್ರಶೇಖರ್, 10 ಬೇಡಿಕೆಗಳಲ್ಲಿ ಸರ್ಕಾರ 9 ಅನ್ನು ಈಡೇರಿಸಿದೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆಯೊಂದೇ ಬಾಕಿ ಉಳಿದಿದೆ. ಇದರ ಈಡೇರಿಕೆಗಾಗಿ ಸರ್ಕಾರಕ್ಕೆ 3 ತಿಂಗಳ ಗಡುವು ನೀಡಲಾಗಿದೆ. ಒಂದು ವೇಳೆ 3 ತಿಂಗಳೊಳಗಾಗಿ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದಿದ್ದರೇ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಕ್ಷಣಕ್ಕೊಂದು ತಿರುವು, ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಸಾರಿಗೆ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿತ್ತು. ಭಾನುವಾರ ನಡೆದ ಸಂಧಾನ ಮಾತುಕತೆಯಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಸಾರಿ ಹೇಳಿದರೆ, ನಮ್ಮ ಬೇಡಿಕೆ ಈಡೇರದ ಹೊರತು ಬಸ್ ಸಂಚಾರ ಆರಂಭಿಸುವುದಿಲ್ಲ ಎಂದು ನೌಕರರು ಪಟ್ಟುಹಿಡಿದು ಧರಣಿ ಮುಂದುವರಿಸಿದ್ದರು.

ಇದೀಗ ಮುಷ್ಕರ ಹಿಂಪಡೆಯಲಾಗಿದ್ದು, ರಾಜ್ಯದೆಲ್ಲೆಡೆ ಸರ್ಕಾರಿ ಬಸ್ ಗಳ ಸಂಚಾರ ಆರಂಭಗೊಂಡಿದೆ.

- Advertisement -

Latest News

error: Content is protected !!