Monday, June 29, 2026
Homeಕರಾವಳಿಸುಬ್ರಹ್ಮಣ್ಯ: ಸೈಕಲ್ ಕಲಿಯಲು ತೆರಳಿದ್ದ ಬಾಲಕಿಗೆ ಶಾಲಾ ಆಡಳಿತಾಧಿಕಾರಿಯಿಂದ ಲೈಂಗಿಕ ಕಿರುಕುಳ

ಸುಬ್ರಹ್ಮಣ್ಯ: ಸೈಕಲ್ ಕಲಿಯಲು ತೆರಳಿದ್ದ ಬಾಲಕಿಗೆ ಶಾಲಾ ಆಡಳಿತಾಧಿಕಾರಿಯಿಂದ ಲೈಂಗಿಕ ಕಿರುಕುಳ

- Advertisement -
- Advertisement -

ಸುಳ್ಯ: ಸೈಕಲ್ ಕಲಿಯಲು ತೆರಳಿದ್ದ ಬಾಲಕಿಗೆ ಶಾಲಾ ಆಡಳಿತಾಧಿಕಾರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ. ದೇವಚಳ್ಳ ಗ್ರಾಮದ ಎಲಿಮಲೆ ಎಂಬಲ್ಲಿ ಸೈಕಲ್ ಕಲಿಯಲು ಹೋದ ಬಾಲಕಿಯೊಬ್ಬಳನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಾಲಾ ಆಡಳಿತಾಧಿಕಾರಿಯನ್ನು ವಜಾಗೊಳಿಸಲಾಗಿದೆ.

ಡಿಸೆಂಬರ್ 10 ರಂದು ಘಟನೆ ನಡೆದಿದ್ದು, ಸುಳ್ಯ ತಾಲೂಕಿನ ದೇವಚಲ್ಲ ಗ್ರಾಮದ ಅನಿಲ್ ಅಮಾನತುಗೊಂಡಿರುವ ಸಿಬ್ಬಂದ., ಬಾಲಕಿಗೆ ಹೊಸ ಬೈಸಿಕಲ್ ತಂದು ಕೊಡುವ ಭರವಸೆ ನೀಡಿ, ಬೈಸಿಕಲ್ ತುಳಿಯುವುದು ಹೇಗೆ ಎಂದು ಹೇಳಿಕೊಡುವುದಾಗಿ ತಿಳಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸುಬ್ರಮಣ್ಯ ಪೊಲೀಸರು ತಿಳಿಸಿದ್ದಾರೆ.

ಎಲಿಮಲೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಅನಿಲ್ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ, ಅನಿಲ್ ಮತ್ತು ಬಾಲಕಿ ತಂದೆ ಸ್ನೇಹಿತರಾಗಿದ್ದಾರೆ. ಮನೆಗೆ ಬಂದ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ, ನಂತರ ಪೋಷಕರು ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂಬುದನ್ನು ತಿಳಿದ ಶಾಲಾ ಆಡಳಿತ ಮಂಡಳಿ ಅನಿಲ್ ನನ್ನು ಅಮಾನತು ಮಾಡಿದೆ.

ಇದೇ ವೇಳೆ ಬಾಲಕಿ ತಾಯಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2012ರ ಪೊಸ್ಕೋ ಕಾಯಿದೆಯಡಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!