Wednesday, October 28, 2026
Homeಕರಾವಳಿಉಡುಪಿಉಡುಪಿ;ರೌಡಿಶೀಟರ್ ಸುಜಿತ್ ಪಿಂಟೋ ಬರ್ಬರ ಹತ್ಯೆ; ಅಣ್ಣ ತಮ್ಮನ ಬಂಧನ

ಉಡುಪಿ;ರೌಡಿಶೀಟರ್ ಸುಜಿತ್ ಪಿಂಟೋ ಬರ್ಬರ ಹತ್ಯೆ; ಅಣ್ಣ ತಮ್ಮನ ಬಂಧನ

- Advertisement -
- Advertisement -

ಉಡುಪಿ;ವೈಯಕ್ತಿಕ ಹಾಗೂ ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಮಲ್ಪೆ ಠಾಣೆಯ ರೌಡಿಶೀಟರ್ ಸುಜಿತ್ ಪಿಂಟೋ ಎಂಬಾತನನ್ನು ಸ್ಟೀಲ್ ಪೈಪ್‌ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾದ ಘಟನೆ ಅಕ್ಟೋಬರ್ 27ರ ರಾತ್ರಿ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ನಡೆದಿದೆ. ಕೃತ್ಯ ಎಸಗಿದ ಆರೋಪಿಗಳಾದ ಪಡುಬೈಕಾಡಿಯ ಪ್ರದೀಪ್ ಪೂಜಾರಿ (45) ಹಾಗೂ ಪ್ರಮೋದ್ ಪೂಜಾರಿ (39) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 27ರ ರಾತ್ರಿ ಭದ್ರಗಿರಿ ಸರ್ಕಲ್ ಬಳಿ ವೈಯಕ್ತಿಕ ವಿಚಾರವಾಗಿ ಸುಜಿತ್ ಪಿಂಟೋ, ಜೀವನ್ ಪೂಜಾರಿ ಹಾಗೂ ಆರೋಪಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಪ್ರದೀಪ್, ಸುಜಿತ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಪ್ರಮೋದ್ ಸ್ಟೀಲ್ ಪೈಪ್‌ನಿಂದ ಸುಜಿತ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಲಾಟೆ ಬಿಡಿಸಲು ಬಂದ ಜೀವನ್ ಪೂಜಾರಿ ಮೇಲೂ ಹಲ್ಲೆ ನಡೆಸಲಾಗಿದೆ.

ಘಟನೆಯ ಪ್ರತ್ಯಕ್ಷದರ್ಶಿ ಜೀವನ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸುಜಿತ್ ಪಿಂಟೋ ವಿರುದ್ಧ ಉಡುಪಿ, ಮಲ್ಪೆ, ಹಿರಿಯಡ್ಕ ಹಾಗೂ ಮಣಿಪಾಲ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ಆತ ರೌಡಿಶೀಟರ್ ಆಗಿದ್ದ. ಆರೋಪಿಗಳ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!