Wednesday, October 28, 2026
Homeಕರಾವಳಿಉಡುಪಿಉಡುಪಿ: ರೌಡಿಶೀಟರ್ ಸುಜಿತ್ ಪಿಂಟೊ ಭೀಕರ ಹತ್ಯೆ: ಆಟೋ ಚಾಲಕ ಬಂಧನ

ಉಡುಪಿ: ರೌಡಿಶೀಟರ್ ಸುಜಿತ್ ಪಿಂಟೊ ಭೀಕರ ಹತ್ಯೆ: ಆಟೋ ಚಾಲಕ ಬಂಧನ

- Advertisement -
- Advertisement -

ಉಡುಪಿ: ಕರಾವಳಿಯ ಪ್ರಮುಖ ಕೊಲೆ ಪ್ರಕರಣಗಳ ಆರೋಪಿ, ಕುಖ್ಯಾತ ರೌಡಿಶೀಟರ್ ಸಂತೆಕಟ್ಟೆ ಮೂಲದ ಸುಜಿತ್ ಪಿಂಟೊ (43) ಎಂಬಾತನನ್ನು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಪ್ರಮೋದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಎಸ್ಪಿ ಹರಿರಾಮ್ ಶಂಕರ್ ನೀಡಿರುವ ಮಾಹಿತಿಯಂತೆ, ದಿನಸಿ ಸಾಮಾಗ್ರಿಯ ಬಾಕಿ ಹಣದ ವಿಚಾರವಾಗಿ ಸುಜಿತ್ ಹಾಗೂ ಪ್ರಮೋದ್ ನಡುವೆ ಗಲಾಟೆ ನಡೆದಿದೆ. ಇಬ್ಬರೂ ಮದ್ಯ ಸೇವಿಸಿದ್ದ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿ, ಪ್ರಮೋದ್ ಕಬ್ಬಿಣದ ರಾಡ್‌ನಿಂದ ಸುಜಿತ್ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆಯಾದ ಸುಜಿತ್ ಪಿಂಟೊ 2018ರ ಮಣಿಪಾಲದ ಗುರುಪ್ರಸಾದ್ ಭಟ್ ಹಾಗೂ 2020ರ ತೆಂಕನಿಡಿಯೂರಿನ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ವಿರುದ್ಧ ಬಿಎನ್‌ಎಸ್ (BNS) ಕಲಂ 103ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!