Tuesday, October 27, 2026
Homeಕರಾವಳಿಮಂಗಳೂರುಮಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ಪಿಕಪ್ ವಾಹನ ಅಡ್ಡಗಟ್ಟಿ ಜೀವಬೆದರಿಕೆ: ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಗೋ ಮಾಂಸ ಸಾಗಿಸುತ್ತಿದ್ದ ಪಿಕಪ್ ವಾಹನ ಅಡ್ಡಗಟ್ಟಿ ಜೀವಬೆದರಿಕೆ: ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು: ಕೇರಳದ ಉಪ್ಪಳದಿಂದ ಕಾನೂನುಬದ್ಧ ಬಿಲ್‌ನೊಂದಿಗೆ ಎಮ್ಮೆ ಹಾಗೂ ಎತ್ತಿನ ಮಾಂಸ ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ದುಷ್ಕರ್ಮಿಗಳು ಕಾರುಗಳಲ್ಲಿ ಬೆನ್ನಟ್ಟಿ, ಬ್ಯಾರಿಕೇಡ್ ಅಡ್ಡಹಾಕಿ ಜೀವಬೆದರಿಕೆಯೊಡ್ಡಿದ ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೋಕಟ್ಟೆ ನಿವಾಸಿ, ಪಿಕಪ್ ಚಾಲಕ ಮೊಹಮ್ಮದ್ ಅಫ್ರೀದ್ ದೂರು ನೀಡಿದವರಾಗಿದ್ದಾರೆ. ಅಕ್ಟೋಬರ್ 25ರಂದು ಬೆಳಗಿನ ಜಾವ ಉಪ್ಪಳದ ಬಂದಿಯೋಡ್‌ನಿಂದ ಸುಮಾರು 327 ಕೆ.ಜಿ ಮಾಂಸವನ್ನು ಬಿಲ್ ಸಹಿತ ಪಿಕಪ್‌ನಲ್ಲಿ ತುಂಬಿಸಿಕೊಂಡು ವಾಪಸಾಗುತ್ತಿದ್ದ ವೇಳೆ ತಲಪಾಡಿ ಟೋಲ್ ಗೇಟ್ ಬಳಿಯಿಂದ ಬಿಳಿ ಬಣ್ಣದ ಸೆಲೆರಿಯೋ ಹಾಗೂ ಕ್ರೇಟಾ ಕಾರುಗಳಲ್ಲಿ ಬಂದ 5-6 ಮಂದಿ ಅಜ್ಞಾತ ದುಷ್ಕರ್ಮಿಗಳು ವಾಹನವನ್ನು ಬೆನ್ನಟ್ಟಿದ್ದಾರೆ.

ರಾಡ್ ಹಿಡಿದು ಬ್ಯಾರಿಕೇಡ್ ಅಡ್ಡಹಾಕಿ ತಡೆಯಲು ಯತ್ನಿಸಿದಾಗ ಚಾಲಕ ಸಮಯಪ್ರಜ್ಞೆಯಿಂದ ವಾಹನವನ್ನು ತಪ್ಪಿಸಿಕೊಂಡು ಕಾವೂರು, ಮರವೂರು ಮಾರ್ಗವಾಗಿ ಜೋಕಟ್ಟೆಯ ಶಾಪ್‌ಗೆ ತಲುಪಿಸಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಭಯಗೊಂಡಿದ್ದ ಚಾಲಕ ಬಳಿಕ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!