- Advertisement -
- Advertisement -
ಕಾರ್ಕಳ: ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೊರಟ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಿಂಜೂರು ಗ್ರಾಮದಲ್ಲಿ ನಡೆದಿದೆ.
ನಿಂಜೂರು ಗ್ರಾಮದ ಎಡ್ಮೇರು ನಿವಾಸಿ ಅಕ್ಷಯ ಆಚಾರ್ಯ (30) ನಾಪತ್ತೆಯಾದ ಯುವಕ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ಅಕ್ಟೋಬರ್ 17ರಂದು ಊರಿಗೆ ಬಂದಿದ್ದರು. ಬಳಿಕ ಹೋಟೆಲ್ ಮಾಲೀಕರು ಕರೆ ಮಾಡಿದ ಹಿನ್ನೆಲೆಯಲ್ಲಿ ಅಂದೇ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದರು. ಆದರೆ, ಅವರು ಬೆಂಗಳೂರಿಗೂ ಹೋಗದೆ, ಮನೆಗೂ ಮರಳದೆ ಕಾಣೆಯಾಗಿದ್ದಾರೆ.
ಈ ಕುರಿತು ತಂದೆ ಬಾಲಕೃಷ್ಣ ಆಚಾರ್ಯ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
- Advertisement -


