Monday, June 8, 2026
Homeಕರಾವಳಿಬಪ್ಪನಾಡು: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ವೃದ್ದೆ ಸಾವು

ಬಪ್ಪನಾಡು: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ವೃದ್ದೆ ಸಾವು

- Advertisement -
- Advertisement -

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಬಳಿ ನಡೆದ ಅಪಘಾತದಲ್ಲಿ ವೃದ್ದೆ ಮೃತಪಟ್ಟಿದ್ದಾರೆ.

ಮೃತ ವೃದ್ದೆಯನ್ನು ಹೆಜಮಾಡಿ ಕೊಕ್ರಾಣಿ ನಿವಾಸಿ ಅಪ್ಪಿ ಸಾಲ್ಯಾನ್(85) ಎಂದು ಗುರುತಿಸಲಾಗಿದೆ.

ಮೃತ ವೃದ್ದೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ವೃದ್ದೆಯ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಅಪಘಾತದಿಂದ ಬೈಕ್ ಸವಾರ ಮತ್ತು ಸಹ ಸವಾರ ಗಂಭೀರ ಗಾಯಗೊಂಡಿದ್ದಾರೆ. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

- Advertisement -

Latest News

error: Content is protected !!