Wednesday, June 24, 2026
Homeಕರಾವಳಿಉಡುಪಿಭೂಗತಪಾತಕಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಸೇವಾ ನಿವೃತ್ತಿ; ನಿವೃತ್ತಿಗೂ ಎರಡು ದಿನ...

ಭೂಗತಪಾತಕಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಸೇವಾ ನಿವೃತ್ತಿ; ನಿವೃತ್ತಿಗೂ ಎರಡು ದಿನ ಮೊದಲು ಒಲಿದ ಎಸಿಪಿ ಹುದ್ದೆ

- Advertisement -
- Advertisement -

ಮುಂಬಯಿ: ಒಂದು ಕಾಲದಲ್ಲಿ ಮುಂಬಯಿಯ ಭೂಗತಲೋಕದ ಪಾತಕಿಗಳಿಗೆ ಸಿಂಹಸ್ವಪ್ನರಾಗಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್  ತಮ್ಮ ಸೇವೆಯಿಂದ ನಿವೃತ್ತರಾಗಿದ್ದಾರೆ.ಆದರೆ ನಿವೃತ್ತಿಗೂ ಎರಡು ದಿನಗಳ ಮೊದಲು ದಯಾನಾಯಕ್ ಗೆ ಎಸಿಪಿ ಹುದ್ದೆ ಒಲಿದಿದೆ.

ದಯಾನಾಯಕ ಅವರು ಇಂದು ನಿವೃತ್ತಿಯಾಗುತ್ತಿದ್ದು, 2 ದಿನ ಹಿಂದೆ ಮಹಾ ರಾಷ್ಟ್ರ ಸರ್ಕಾರ ಅವರಿಗೆ ಎಸಿಪಿ ಹುದ್ದೆಗೆ ಬಡ್ತಿ ನೀಡಿದೆ. .ಈ ಬಗ್ಗೆ ದಯಾನಾಯಕ್ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಮೊದಲ ಬಾರಿಗೆ ಎಸಿಪಿ ಸಮ ವಸ್ತ್ರ ಧರಿಸುತ್ತಿದ್ದೇನೆ. ಶಾಶ್ವತವಾಗಿ ಅದನ್ನು ನೇತು ಹಾಕುವ ಒಂದು ದಿನದ ಮೊದಲು ಇದು ಕೊನೆಯಲ್ಲಿ ಬಂದಿರಬಹುದು. ಇದು ಬಡ್ತಿ ಮಾತ್ರವಲ್ಲದೇ ಜೀವಿತಾವಧಿಯ ಕರ್ತವ್ಯ, ಶಿಸ್ತು ಮತ್ತು ಸಮರ್ಪಣೆ ಗುರುತಿಸುವ ಗೌರವ ಎಂದಿದ್ದಾರೆ. ದಯಾ ನಾಯಕ್ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಯವರು. ಮುಂಬೈಗೆ ಜೀವನ ನಡೆಸಲು ತೆರಳಿದ್ದ ಅವರು ದುಡಿಮೆಗಾಗಿ ಪ್ಲಂಬರ್, ಕ್ಯಾಂಟಿನ್ ಕೆಲಸ ಮಾಡಿದ್ದರು. ಕೆಲಸ ಮಾಡುತ್ತಲೇ ವಿದ್ಯಾ ಭ್ಯಾಸ ಮಾಡಿ ಮಹಾರಾಷ್ಟ್ರದಲ್ಲಿ ಪೊಲೀಸ್‌ ಹುದ್ದೆಗೆ ಸೇರ್ಪಡೆಯಾಗಿದ್ದರು. 1995ರಲ್ಲಿ ಮಹಾರಾಷ್ಟ್ರದ ಜುಹು ಪೊಲೀಸ್ ಠಾಣೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅಲ್ಲಿಂದ ಸುದೀರ್ಘ ಮೂರು ದಶಕಗಳ ಕಾಲ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಅವರು ಗುರುವಾರ ನಿವೃತ್ತರಾಗಲಿ ದ್ದಾರೆ. ಖಡಕ್ ಅಧಿಕಾರಿಯಾಗಿದ್ದ ಇವರು ಗ್ಯಾಂಗ್‌ಸ್ಟರ್‌ಗಳ ಶೂಟೌಟ್ ಮೂಲಕ ಎನ್‌ಕೌಂಟರ್‌ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಗಳಿಸಿದ್ದರು. ದಯಾನಾಯಕ್‌ತಮ್ಮ ವೃತ್ತಿ ಜೀವನದಲ್ಲಿ 87 ಗ್ಯಾಂಗ್ ಸ್ಟರ್‌ಗಳನ್ನು ಶೂಟೌಟ್ ಮಾಡಿದ್ದರು. ದಾವೂದ್ ಇಬ್ರಾಹಿಂ, ಅಮ‌ರ್ ನಾಯ್, ಛೋಟಾರಾಜನ್, ಅರುಣ್ ಗೌಳಿಯರಂತಹ ಪಾತಕಿಗಳ ನಂಟು ಹೊಂದಿದ್ದವರಿಗೆ ಶೂಟ್ ಮಾಡಿದ್ದರು.

2006ರಲ್ಲಿ ಮಾಜಿ ಪತ್ರಕರ್ತಕೇತನ್ ತಿರೋಡ್ಕರ್ ದಯಾ ನಾಯಕ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು, ಈ ಹಿನ್ನೆಲೆ ಎಸಿಬಿಯಿಂದ ಅರೆಸ್ಟ್ ಆಗಿ ಸಸ್ಪೆಂಡ್ ಆಗಿದ್ದರು. ಸುಪ್ರೀಂಕೋರ್ಟ್ ಅವರ ಮೇಲಿನ ಎಲ್ಲಾ ಆರೋಪಗಳನ್ನು ರದ್ದುಗೊಳಿಸಿತ್ತು. 2012ರಲ್ಲಿ ಸೇವೆಗೆ ಮರು ಸೇರ್ಪಡೆಗೊಂಡಿದ್ದರು. ದಯಾನಾಯಕ್ ಅವರ ವೃತ್ತಿ ಮತ್ತು ಜೀವನದ ಕುರಿತಂತೆ ಹಲವು ಭಾಷೆಗಳಲ್ಲಿ ಸಿನೆಮಾಗಳು ಬಂದಿವೆ. ಕೊನೆಗೂ ಮುಂಬೈ ಭೂಗತ ಲೋಕವನ್ನೇ ನಡುಗಿಸಿದ್ದ ಕನ್ನಡಿಗ ಇದೀಗ ನಿವೃತ್ತಿ ಹೊಂದಿದ್ದಾರೆ.

- Advertisement -

Latest News

error: Content is protected !!