- Advertisement -
![]()
- Advertisement -
ಮಂಗಳೂರು: ಕಂಕನಾಡಿ ನಗರ ಠಾಣೆಯ ಪೊಲೀಸರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಸ್ಕೂಟರ್‌ನ್ನು ವಶಕ್ಕೆ ಪಡೆದಿದ್ದಾರೆ.
ಸ್ಕೂಟರ್‌ನ ಸವಾರ ನೌಷದ್ ಆಲಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ತಾನು ಸುನೀಲ್ ಡಿ’ಸೋಜಾನೊಂದಿಗೆ ಸೇರಿ ಆಡಂಕುದ್ರುವಿನಲ್ಲಿ ನೇತ್ರಾವತಿ ನದಿಯ ತೀರದಿಂದ ಮರಳು ತುಂಬಿಸಿಕೊಂಡು ಹೋಗುತ್ತಿದ್ದು ಪಿಕಪ್ ವಾಹನಕ್ಕೆ ಸ್ಕೂಟರ್‌ನ್ನು ಬೆಂಗವಲಾಗಿ ಬಳಕೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಆಡಂಕುದ್ರುವಿನ ಚಾಪೆಲ್ ಚರ್ಚ್ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ಮಂಗಳವಾರದಂದು ಪೊಲೀಸ್ ಉಪನಿರೀಕ್ಷಕ ಶಿವಕುಮಾರ್ ಅವರು ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಪಿಕಪ್‌ನ ಚಾಲಕನು ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ಓಡಿ ಹೋಗಿದ್ದಾನೆ.
ಪಿಕಪ್ ವಾಹನದಲ್ಲಿ ಸುಮಾರು 40 ಬುಟ್ಟಿ ಮರಳು ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -


