ಮುಂಬಯಿ: ಜಯ ಸಿ. ಸುವರ್ಣ ಅಭಿಮಾನಿ ಬಳಗ ಹಾಗೂ ಮುಂಬಯಿ ಬಿಲ್ಲವರು ಅವರ ಸಹಯೋಗದಲ್ಲಿ ಜಯ ಸಿ. ಸುವರ್ಣ ಮಹಿಳಾ ಅಭಿಮಾನಿಗಳಿಂದ ʻಆಟಿದ ಪೊರ್ಲ ಪೊಲಬುʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು 2025 ಆಗಸ್ಟ್ 02 ಶನಿವಾರದಂದು ಮುಂಬಯಿಯ ಗೋರೆಗಾಂವ್ ಪೂರ್ವದ ಜಯಲೀಲಾ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.
ʻಆಟಿದ ಪೊರ್ಲ ಪೊಲಬುʼ ಕಾರ್ಯಕ್ರಮದ ಉದ್ಘಾಟನೆಯನ್ನ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಆಶೀರ್ವಚನವನ್ನ ಕನ್ನಡ ಸಂಘ ಸಾಯನ್ ಅಧ್ಯಕ್ಷ ಡಾ ಪ್ರವೀಣ್ ಜೆ. ಭಟ್, ಜಯ ಸಿ. ಸುವರ್ಣ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ನಿಶಿತಾ ಎಸ್ ಸುವರ್ಣ, ಅತಿಥಿಗಳಾಗಿ ಸಮಾಜ ಸೇವಕಿ ಶ್ರೀಮತಿ ಸಾಯಿಲ್ ಸುನಿಲ್ ಪ್ರಭು, ಮನಃಶಾಸ್ತ್ರಜ್ಞೆ ಶ್ರೀಮತಿ ನೈನಾ ಓಕೆ, ಯೋಗ ಶಿಕ್ಷಕಿ ಶ್ರೀಮತಿ ಕಲ್ಪನಾ ಹರೀಶ್ ಕುಮಾರ್, ಸಮಾಜ ಸೇವಕಿ ಶ್ರೀಮತಿ ಜಯಲಕ್ಷ್ಮೀ ಸಿ. ಪೂಜಾರಿ, ಸಮಾಜ ಸೇವಕಿ ಶ್ರೀಮತಿ ಪುಷ್ಪಲತಾ ಬಿ. ಪಾಲನ್, ಸಮಾಜ ಸೇವಕಿ ಶ್ರೀಮತಿ ಲತಾ ಸಂತೋಷ್ ಶೆಟ್ಟಿ, ಸಮಾಜ ಸೇವಕಿ ಶ್ರೀಮತಿ ಲತಾ ಎಸ್. ಸುವರ್ಣ, ಸಮಾಜ ಸೇವಕಿ ಶ್ರೀಮತಿ ಪೂರ್ಣಿಮಾ ಎಂ. ಪೂಜಾರಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ನೃತ್ಯ, ತುಳುನಾಡಿನ ವಿವಿಧ ಪ್ರಕಾರದ ಆಟ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮುಂಬಯಿ ಬಿಲ್ಲವರು ಹಾಗೂ ಜಯ ಸಿ. ಸುವರ್ಣ ಮಹಿಳಾ ಅಭಿಮಾನಿಗಳ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.


