Thursday, June 4, 2026
Homeಉತ್ತರ ಕನ್ನಡಅಡಿಕೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು

ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮದ ಹೊರವಲಯದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಅಡಿಕೆ ತೋಟ, ಗದ್ದೆಗೆ ಆನೆ ಹಿಂಡು ಲಗ್ಗೆಯಿಟ್ಟಿದೆ‌‌.

ಆನೆಗಳ ಹಿಂಡು ಕಂಡು ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಒಂದು ಗಂಡು ಆನೆ, ಎರಡು ಹೆಣ್ಣು ಆನೆಗಳು ಮತ್ತು ಒಂದು ಮರಿ ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಅಡಿಕೆ ತೋಟಕ್ಕೆ ನುಗ್ಗಿ ಗಜ ಪಡೆ ಹತ್ತಾರು ಮರಗಳಿಗೆ ಹಾನಿ ಮಾಡಿದ್ದು, ಆನೆಗಳ ಗುಂಪು ಓಡಾಟದಿಂದ ಹೊಲ ಮತ್ತು ಗದ್ದೆಗಳಿಗೆ ಹಾನಿ ಉಂಟಾಗಿದೆ‌.

ಕಾತೂರ ಭಾಗದಿಂದ ಬಿಸಲಕೊಪ್ಪ ಗ್ರಾಮಕ್ಕೆ ಆನೆಗಳು ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಆನೆಗಳನ್ನು ಕಾಡಿಗೆ ಬಿಡಲು ಹರ ಸಾಹಸ ಪಟ್ಟಿದ್ದಾರೆ. ಆನೆಗಳ ಹಿಂಡು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತೋಟಗಳಿಗೆ ತೆರಳದಂತೆ ಸಾರ್ವಜನಿಕರಲ್ಲಿ ಬನವಾಸಿ ಆರ್‌ಎಫ್ಓ ಮನವಿ ಮಾಡಿದ್ದಾರೆ

- Advertisement -

Latest News

error: Content is protected !!