Thursday, June 4, 2026
Homeಕರಾವಳಿಕದ್ರಿ ಮಲ್ಲಿಕಟ್ಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ಉದ್ಘಾಟನೆ

ಕದ್ರಿ ಮಲ್ಲಿಕಟ್ಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ಉದ್ಘಾಟನೆ

- Advertisement -
- Advertisement -

ಮಂಗಳೂರು: ಕದ್ರಿ ಮಲ್ಲಿಕಟ್ಟೆ ಶ್ರೀ ದೈವರಾಜ‌ಕೋಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮೇಲ್ಛಾವಣಿ ಹಾಗೂ ಇಂಟರ್ ಲಾಕ್ ಅಳವಡಿಸುವ‌ ಕಾಮಗಾರಿ ಉದ್ಘಾಟನೆಗೊಂಡಿದೆ.

ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪೂರ್ಣಗೊಂಡಿರುವ ಮೇಲ್ಛಾವಣಿ ಮತ್ತು ಇಂಟರ್ ಲಾಕ್ ಉದ್ಘಾಟಿಸಿದ್ದಾರೆ.

ಇಂಟರ್ ಲಾಕ್ ಅಳವಡಿಕೆಗೆ ಶಾಸಕ ವೇದವ್ಯಾಸ ಕಾಮತ್ 50 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದರು.

ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಡಿಬಿ ನೆರವಿನ ಕ್ವಿಮಿಪ್ ಜಲಸಿರಿ ಯೋಜನೆಯ ಭಾಗವಾಗಿ ಕೋಡಿಕಲ್ ಹಾಗೂ ಚಿಲಿಂಬಿ ಮೇಲ್ಮಟ್ಟದ ಜಲ ಸಂಗ್ರಹಾಗಾರಗಳಿಗೆ ನೀರು ಪೂರೈಸಲು 2.5 ಕೋಟಿ ವೆಚ್ಚದಲ್ಲಿ 20 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣ ಕಾಮಗಾರಿಗೆ ಆಫಿಸರ್ಸ್ ಕ್ಲಬ್ ಬಳಿ ಭೂಮಿಪೂಜೆ ನೆರವೇರಿಸಲಾಗಿದೆ.

ಶಾಸಕ ವೇದವ್ಯಾಸ ಕಾಮತ್ ಭೂಮಿ ಪೂಜೆ ನೆರವೇರಿಸಿದರು‌. ಜಲಸಿರಿ ಯೋಜನೆಯಡಿ 792.42 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಗೂ 24×7 ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ.

- Advertisement -

Latest News

error: Content is protected !!