Friday, May 10, 2024
Homeತಾಜಾ ಸುದ್ದಿಕುಡಿದ ಮತ್ತಿನಲ್ಲಿ ಬೆಟ್ಟಿಂಗ್ ಹುಚ್ಚಾಟ; ಕಣ್ಣಿಗೆ ಬಟ್ಟೆ ಕಟ್ಟಿ ಈಜಲು ಹೋದ ವ್ಯಕ್ತಿ ನೀರುಪಾಲು

ಕುಡಿದ ಮತ್ತಿನಲ್ಲಿ ಬೆಟ್ಟಿಂಗ್ ಹುಚ್ಚಾಟ; ಕಣ್ಣಿಗೆ ಬಟ್ಟೆ ಕಟ್ಟಿ ಈಜಲು ಹೋದ ವ್ಯಕ್ತಿ ನೀರುಪಾಲು

spot_img
- Advertisement -
- Advertisement -

ವಿಜಯಪುರ : ಕುಡಿತ ಮತ್ತಿನಲ್ಲಿ ಬೆಟ್ಟಿಂಗ್ ಹಣಕ್ಕಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆರೆಯಲ್ಲಿ ಈಜಲು ಮುಂದಾದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ.


ಮೃತನ ಕುಟುಂಬದವರು ಇದನ್ನು ವ್ಯವಸ್ಥಿತ ಹತ್ಯೆ ಎಂದು ಆರೋಪಿಸಿದ್ದು, ಪೊಲೀಸರು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.


ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದ್ಯಾಬೇರಿ ಗ್ರಾಮದ 45 ವರ್ಷದ ಪ್ರಕಾಶ ಮೋರೆ ಮೃತ ದುರ್ದೈವಿ. ಭಾನುವಾರ ಸಂಜೆ ಸ್ನೇಹಿತರೊಂದಿಗೆ ಸೇರಿ ಮದಭಾವಿಗೆ ಹೋಗಿದ್ದಾಗ ಮದ್ಯ ಸೇವನೆ ಮಾಡಿದ್ದ.
ಈ ಹಂತದಲ್ಲಿ ಜೊತೆಗಿದ್ದ ಸ್ನೇಹಿತರಾದ ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಹಾಗೂ ಬಸವರಾಜ ನಾಟಿಕಾರ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜುವ 20 ಸಾವಿರ ರೂ. ಬೆಟ್ಟಿಂಗ್ ಕಟ್ಟಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಈಜುತ್ತ ತಮ್ಮೂರ ಕೆರೆಯ ಒಂದು ದಡದಿಂದ ಇನ್ನೊಂದು ದಡ ಮುಟ್ಟುವ ಬೆಟ್ಟಿಂಗ್‌ಗಾಗಿ ಪ್ರಕಾಶ ಮೋರೆಯನ್ನು ಕೆರೆಯಲ್ಲಿ ಈಜಲು ಇಳಿಸಿದ್ದರು.


ಈ ವೇಳೆ ಜೊತೆಗಿದ್ದ ಸ್ನೇಹಿತರಾದ ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಹಾಗೂ ಬಸವರಾಜ ನಾಟಿಕಾರ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜಿದರೆ 20 ಸಾವಿರ ರೂ. ಕೊಡುವುದಾಗಿ ಬೆಟ್ಟಿಂಗ್ ಕಟ್ಟಿದ್ದರು. ಇದಕ್ಕೆ ಒಪ್ಪಿದ ಪ್ರಕಾಶ ಮೇ 8 ರಂದು ಸಂಜೆ 5 ಗಂಟೆಗೆ ದ್ಯಾಬೇರಿ ಪಕ್ಕದ ಕೆರೆಯಲ್ಲಿ ಮೊದಲೇ ಮದ್ಯದ ಅಮಲಿನಲ್ಲಿದ್ದ ಪ್ರಕಾಶ ಇಪ್ಪತ್ತು ಸಾವಿರದ ಆಸೆಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿಗೆ ದುಮುಕಿದ್ದಾನೆ ಆದರೆ ಮದ್ಯದ ನಶೆಯಲ್ಲಿದ್ದ ಪ್ರಕಾಶನಿಗೆ ಈಜಲು ಆಗದೆ ನೀರಿನಲ್ಲಿ ಮುಳುಗಿದ್ದಾನೆ.


ಕೆಲ ಹೊತ್ತು ಕಳೆದರೂ ಮೇಲೆ ಬಾರದಿರುವುದನ್ನು ಕಂಡ ಅಲ್ಲಿದ್ದವರು ಪೊಲೀಸರಿಗೆ, ಅಗ್ನಿಶಾಮಕಕ್ಕೆ ವಿಚಾರ ತಿಳಿಸಿದ್ದಾರೆ ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ಹಾಗೂ ನುರಿತ ಈಜುಗಾರರೊಂದಿಗೆ ಶೋಧ ಕಾರ್ಯ ನಡೆಸಿದ್ದರೂ ಪ್ರಕಾಶ ಮಾತ್ರ ಪತ್ತೆಯಾಗಿರಲಿಲ್ಲ

- Advertisement -
spot_img

Latest News

error: Content is protected !!