Thursday, June 4, 2026
Homeಕರಾವಳಿಮನೆ ಬಿಟ್ಟು ಹೋದ ಪತ್ನಿಯ ಚಿಂತೆಯಲ್ಲಿ ನೇಣಿಗೆ ಶರಣಾದ ವ್ಯಕ್ತಿ

ಮನೆ ಬಿಟ್ಟು ಹೋದ ಪತ್ನಿಯ ಚಿಂತೆಯಲ್ಲಿ ನೇಣಿಗೆ ಶರಣಾದ ವ್ಯಕ್ತಿ

- Advertisement -
- Advertisement -

ಹೆಬ್ರಿ: ಮನೆ ಬಿಟ್ಟು ಹೋದ ಪತ್ನಿಯ ಚಿಂತೆಯಲ್ಲಿ ವಿಪರೀತ ಮದ್ಯ ಸೇವನೆ ಚಟಕ್ಕೆ ಒಳಗಾದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 9ರಂದು ಬೆಳಗ್ಗೆ ನಡೆದಿದೆ.


ಮೃತರನ್ನು ಹೆಬ್ರಿ ಪಡುಕುಡೂರು ಗ್ರಾಮದ ನೆಕ್ಕರ್‌ಬೆಟ್ಟು ನಿವಾಸಿ ಆನಂದ ಶೆಟ್ಟಿ ಎಂಬವರ ಮಗ ಸುರೇಶ ಶೆಟ್ಟಿ (48) ಎಂದು ಗುರುತಿಸಲಾಗಿದೆ.


ಸುರೇಶ್ ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದು, ಇವರ ಜೊತೆ ಮನಸ್ತಾಪ ದಿಂದ ಪತ್ನಿ 2 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಇದೇ ಚಿಂತೆಯಲ್ಲಿ ಜೀವನದಲ್ಲಿ ಜೀಗುಪ್ಪೆಗೊಂಡ ಅವರು ಮನೆಯ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!