Sunday, June 7, 2026
Homeಕರಾವಳಿಕಾಸರಗೋಡುಕೋರ್ಟ್ ಗೆ ಕರೆ ತರುವಾಗ ಆರೋಪಿ ಪರಾರಿ

ಕೋರ್ಟ್ ಗೆ ಕರೆ ತರುವಾಗ ಆರೋಪಿ ಪರಾರಿ

- Advertisement -
- Advertisement -

ಕಾಸರಗೋಡು: ಕೋರ್ಟ್ ಗೆ ಕರೆ ತರುವಾಗ ಮಾದಕ ವಸ್ತು ಸಾಗಟ ಪ್ರಕರಣದ ಆರೋಪಿ ಪೊಲೀಸರಿಂದ ತಪ್ಪಿಸಿ ಪರಾರಿಯಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಅಹಮ್ಮದ್ ಕಬೀರ್ ( 25) ಪರಾರಿಯಾದ ಆರೋಪಿ.

ಈತನನ್ನು ನ್ಯಾಯಲಯಕ್ಕೆ ಹಾಜರುಪಡಿಸಲು ಕರೆತಂದಿದ್ದಾಗ ನ್ಯಾಯಾಲಯ ಆವರಣದ ಕ್ಯಾಂಟೀನ್ ಗೆ ಆಹಾರ ಸೇವಿಸಲು ತೆರಳಿದ್ದ ಸಂದರ್ಭದಲ್ಲಿ ಈತ ತಪ್ಪಿಸಿ ಪರಾರಿಯಾಗಿದ್ದಾನೆ.

ಪರಾರಿಯಾದವನಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ 23 ರಂದು ಕಬೀರ್ ನನ್ನು ಮಾದಕ ವಸ್ತು ಸಹಿತ ಕಾಸರಗೋಡು ಪೊಲೀಸರು ಬಂಧಿಸಿದ್ದರು.

ಈತ ಗೋವಾದಿಂದ ಎಂ ಡಿ ಎಂ ಎ ಮಾದಕ ವಸ್ತುವನ್ನು ಕಾಸರಗೋಡಿಗೆ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!