Sunday, May 5, 2024
Homeತಾಜಾ ಸುದ್ದಿನಾಟಕ ಪ್ರದರ್ಶನ ವೇಳೆ ಚಾಮುಂಡಿ ಪಾತ್ರಧಾರಿ ಮೈಮೇಲೆ ಬಂದ ಚಾಮುಂಡಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ನಾಟಕ ಪ್ರದರ್ಶನ ವೇಳೆ ಚಾಮುಂಡಿ ಪಾತ್ರಧಾರಿ ಮೈಮೇಲೆ ಬಂದ ಚಾಮುಂಡಿ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

spot_img
- Advertisement -
- Advertisement -

ಮಂಡ್ಯ: ನಾಟಕ ಪ್ರದರ್ಶನ ವೇಳೆ ಚಾಮುಂಡಿ ಪಾತ್ರಧಾರಿಗೆ ಚಾಮುಂಡಿ ದೇವಿಯೇ ಮೈಮೇಲೆ ಬಂದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಕಲಾಮಂದಿರದಲ್ಲಿ ಫೆ.6ರಂದು ನಾಟಕ ಪ್ರದರ್ಶನ ನಡೆಯುತ್ತಿತ್ತು. ರಾಕ್ಷಸ ಸಂಸಾರ ಸನ್ನಿವೇಶದ ವೇಳೆ ಚಾಮುಂಡಿ ದೇವಿ ಪಾತ್ರಧಾರಿ ಇದು ನಾಟಕ ಎಂಬುದನ್ನೂ ಮರೆತು ನಿಜವಾಗಿಯೂ ವಧೆಗೆ ಮುಂದಾದರು. ಆ ವ್ಯಕ್ತಿ ಮೇಲೆ ಸಾಕ್ಷಾತ್​ ಚಾಮುಂಡಿ ತಾಯಿ ಬಂದಿದ್ದರು ಎನ್ನಲಾಗುತ್ತಿದೆ. 

ಪ್ರತೀ ಬಾರಿ ಈ ನಾಟಕ ನಡೆದಾಗಲೆಲ್ಲಾ ಚಾಮುಂಡಿ ಪಾತ್ರಧಾರಿ ಮೇಲೆ ತಾಯಿಯ ಆಹ್ವಾಹನೆ ಆಗುತ್ತೆಂಬ ನಂಬಿಕೆ ಇದೆ. ಈ ಭಾರಿಯೂ ಕೌಂಡಲಿಕನ ವಧೆ ಮಾಡುವ ಸನ್ನಿವೇಶದ ವೇಳೆ ಚಾಮುಂಡೇಶ್ವರಿ ದೇವಿಯ ಪಾತ್ರಧಾರಿ ಮೇಲೆ ದೇವಿ ಆಹ್ವಾಹನೆ ಆಗಿತ್ತು. ಕೌಂಡಲಿಕನ ಪಾತ್ರಧಾರಿಯನ್ನು ನಿಜವಾಗಿ ಕೊಲ್ಲಲು ಮುಂದಾಗಿದ್ದರು. ಇದನ್ನರಿತ ನಾಟಕ ಆಯೋಜಕರು, ಯಾವುದೇ ಕೆಟ್ಟ ಘಟನೆ ಸಂಭವಿಸಬಾರದು ಎಂಬ ಉದ್ದೇಶಕ್ಕೆ ಚಾಮುಂಡಿ ಪಾತ್ರಧಾರಿಯನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದಿದ್ದಾರೆ. ಈ ಸಂದರ್ಭದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

- Advertisement -
spot_img

Latest News

error: Content is protected !!