- Advertisement -
- Advertisement -
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರ ಕಾರ್ಯದರ್ಶಿಯಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ. ಗಿರೀಶ್ ಸಿ ಹೊಸೂರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕವಾಗಲು ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಗಿರೀಶ್ ಹೊಸೂರ್ ಅವರು ದೆಹಲಿಯ ಜೆಎನ್ ಯು, ಜಮಿಯಾ ಮಿಲಿಯಾ, ದೆಹಲಿ ವಿವಿ, ಅಲಹಬಾದ್, ಮಣಿಪುರ ವಿವಿ ಸೇರಿದಂತೆ ಇತರ ವಿವಿಗಳ ವಿದ್ಯಾರ್ಥಿಗಳ ಹಾಗೂ ಇತರ ಪ್ರತಿಭಟನೆಯನ್ನು ಸಕ್ರಿಯವಾಗಿ ಶಮನಗೊಳಿಸಿ. ಗುಣಾತ್ಮಕ ಶಿಕ್ಷಣಕ್ಕಾಗಿ ಗಣನೀಯವಾಗಿ ಸೇವೆಸಲ್ಲಿಸಿದ್ದಾರೆ.
- Advertisement -