- Advertisement -
- Advertisement -
ಮುಂಬೈ : ಕೊರೊನಾ ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿದ್ದು, ಗುರುವಾರ ಒಂದೇ ದಿನ 25 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 229 ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಗೆ ಈವರೆಗೆ 98 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1,364 ಕ್ಕೆ ಏರಿಕೆಯಾಗಿದೆ. ಮುಂಬೈ ಮಹಾನಗರಿಯೊಂದರಲ್ಲೇ ಗುರುವಾರ ಒಂದೇ ದಿನ 79 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 857 ಕ್ಕೆ ಏರಿಕೆಯಾಗಿದೆ.
ಮುಂಬೈ ಬಳಿಕ ಕೊರೊನಾ ವೈರಸ್ ಗೆ ಪುಣೆ ನಗರ ತತ್ತರಿಸಿದ್ದು, ಪುಣೆಯಲ್ಲಿ ಒಂದೇ ದಿನ 14 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇಲ್ಲಿ ಸೋಂಕಿತರ ಸಂಖ್ಯೆ 200 ರ ಗಡೆಇ ದಾಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರಲ್ಲಿ 125 ಮಂದಿ ಚಿಕಿತ್ಸೆ ಗುಣಮುಖರಾಗಿದ್ದಾರೆ.
- Advertisement -