Tuesday, September 17, 2024
Homeತಾಜಾ ಸುದ್ದಿಜಿಲ್ಲಾ ಉಸ್ತುವಾರಿ ಸಚಿವರುಗಳ ದಿಢೀರ್ ಬದಲಾವಣೆ

ಜಿಲ್ಲಾ ಉಸ್ತುವಾರಿ ಸಚಿವರುಗಳ ದಿಢೀರ್ ಬದಲಾವಣೆ

spot_img
- Advertisement -
- Advertisement -

ಬೆಂಗಳೂರು, ಎ.10: ರಾಜ್ಯ ಸರಕಾರವು 2019ರ ಸೆಪ್ಟಂಬರ್‌ 16ರಂದು ಹೊರಡಿಸಿದ್ದ ಆದೇಶದಲ್ಲಿ ಬದಲಾವಣೆ ಮಾಡಿದ್ದು, ತಕ್ಷಣ ಜಾರಿಗೆ ಬರುವಂತೆ ಮುಖ್ಯಮಂತ್ರಿ, ಉಪ ಮುಖ್ಯಂತ್ರಿಗಳು ಮತ್ತು ಸಚಿವರನ್ನು ಮುಂದಿನ ಆದೇಶದವರೆಗೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಿಸಿ ಆದೇಶಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರಿಗೆ ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಯಣರಿಗೆ ರಾಮನಗರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳರಿಗೆ ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

ಸಚಿವರು ಹಾಗೂ ಉಸ್ತುವಾರಿ ಜಿಲ್ಲೆಗಳ ವಿವರ ಇಂತಿವೆ:

  • ಆರ್‌. ಅಶೋಕ್‌ (ಕಂದಾಯ ಸಚಿವರು)- ಬೆಂಗಳೂರು ಗ್ರಾಮಾಂತರ
  • ಜಗದೀಶ್‌ ಶೆಟ್ಟರ್ (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)- ಬೆಳಗಾವಿ, ಧಾರವಾಡ
  • ಬಿ. ಶ್ರೀರಾಮುಲು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ)- ಚಿತ್ರದುರ್ಗ
  • ಎಸ್‌. ಸುರೇಶ್‌ ಕುಮಾರ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ)- ಚಾಮರಾಜನಗರ
  • ವಿ. ಸೋಮಣ್ಣ (ವಸತಿ)- ಕೊಡಗು
  • ಸಿ.ಟಿ.ರವಿ(ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡೆ)- ಚಿಕ್ಕಮಗಳೂರು
  • ಬಸವರಾಜ ಬೊಮ್ಮಾಯಿ (ಗೃಹ)- ಹಾವೇರಿ, ಉಡುಪಿ
  • ಕೋಟಾ ಶ್ರೀನಿವಾಸ ಪೂಜಾರಿ (ಮುಜುರಾಯಿ, ಮೀನುಗಾರಿಕೆ, ಬಂದರು)- ದಕ್ಷಿಣ ಕನ್ನಡ
  • ಜೆ.ಸಿ.ಮಾದುಸ್ವಾಮಿ ( ಕಾನೂನು ಮತ್ತು ಸಂಸದೀಯ ವ್ಯವಹಾರಗಳು)- ತುಮಕೂರು
  • ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ (ಗಣಿ ಮತ್ತು ಭೂ ವಿಜ್ಞಾನ)- ಗದಗ
  • ಎಚ್‌.ನಾಗೇಶ್‌ ( ಅಬಕಾರಿ)-ಕೋಲಾರ
  • ಪ್ರಭು ಚವ್ಹಾಣ್‌ (ಪಶು ಸಂಗೋಪನೆ)- ಬೀದರ್‌, ಯಾದಗಿರಿ
  • ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)- ವಿಜಯಪುರ
  • ಶಿವರಾಮ್ ಹೆಬ್ಬಾರ್ (ಕಾರ್ಮಿಕ ಮತ್ತು ಸಕ್ಕರೆ)- ಉತ್ತರ ಕನ್ನಡ
  • ಎಸ್‌.ಟಿ.ಸೋಮಶೇಖರ್‌( ಸಹಕಾರ)- ಮೈಸೂರು
  • ಡಾ.ಕೆ.ಸುಧಾಕರ್ (ವೈದ್ಯಕೀಯ ಶಿಕ್ಷಣ)- ಚಿಕ್ಕಬಳ್ಳಾಪುರ
  • ಕೆ.ಸಿ.ನಾರಾಯಣ ಗೌಡ (ಪೌರಾಡಳಿ, ತೋಟಗಾರಿಕೆ)- ಮಂಡ್ಯ
  • ಆನಂದ್‌ ಸಿಂಗ್ (ಅರಣ್ಯ)-ಬಳ್ಳಾರಿ
  • ಬಿ.ಎ.ಬೈರತಿ (ನಗರಾಭಿವೃದ್ಧಿ)- ದಾವಣಗೆರೆ
  • ಬಿ.ಸಿ.ಪಾಟೀಲ್(ಕೃಷಿ)- ಕೊಪ್ಪಳ

- Advertisement -
spot_img

Latest News

error: Content is protected !!