Monday, June 8, 2026
Homeಕರಾವಳಿಉಡುಪಿಕಾರ್ಕಳ; ಗೃಹ ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಗೆ ಅಸಭ್ಯ ಕಮೆಂಟ್ ;...

ಕಾರ್ಕಳ; ಗೃಹ ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಗೆ ಅಸಭ್ಯ ಕಮೆಂಟ್ ; ಕಾರ್ಕಳದ ವ್ಯಕ್ತಿಯ ಬಂಧನ

- Advertisement -
- Advertisement -

ಕಾರ್ಕಳ; ಗೃಹ ಸಚಿವ ಪ್ರಿಯಾಂಕ ಖರ್ಗೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಗೆ ಅಸಭ್ಯ ಕಮೆಂಟ್ ಹಾಕಿದ ಕಾರ್ಕಳದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕಾರ್ಕಳದ ಕೆರ್ವಾಶೆ ನಿವಾಸಿ ಸುರೇಶ್(48) ಬಂಧಿತ ಆರೋಪಿ.

ಪ್ರಕರಣದ ವಿವರ : ದಿನಾಂಕ 07.06.2026 ರಂದು ಕಾರ್ಕಳದ ಚೇತನಹಳ್ಳಿ ನಿವಾಸಿ ಸುರೇಶ್ ಅವರು  ಅವರ ಮೊಬೈಲ್ ನಲ್ಲಿ ಇರುವ ಫೇಸ್ ಬುಕ್ ಖಾತೆ ನೋಡುತ್ತಿರುವಾಗ NAMMA KARLA ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಕರ್ನಾಟಕ ರಾಜ್ಯ ಗೃಹ ಮಂತ್ರಿಯವರಾದ ಪ್ರಿಯಾಂಕ ಖರ್ಗೆ ಅವರ ಫೋಟೊ ಹಾಕಿ ಅದರಲ್ಲಿ “ಆರ್ ಎಸ್.ಎಸ್ ಇನ್ನು ಎರಡು ವರ್ಷ ಅವಧಿಯಲ್ಲಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ.- ಪ್ರಿಯಾಂಕ ಖರ್ಗೆ ಎಂದು ಬರೆದ ಪೋಸ್ಟ್ ಇರುತ್ತದೆ, ಈ ಪೋಸ್ಟಗೆ Sudhir Bangera ಎಂಬುವರು ದಿನಾಂಕ 06.06.2026 ರಂದು ಅವಹೇಳನಕಾರಿ ಕಮೆಂಟ್ ಹಾಕಿದ್ದ.

ಆರೋಪಿ ಸುಧೀರ್  ಬಂಗೇರ ಇವರು ಬೇರೆ ಬೇರೆ ಗುಂಪುಗಳ ನಡುವೆ ವೈರತ್ವ, ದ್ವೇಷ ಹಾಗೂ ಅವಮಾನ ಮೂಡಿಸುವ ಕಮೆಂಟ್ನ್ನು ಬರೆದು ಸಾಮಾಜಿಕ ಶಾಂತಿ ಯನ್ನು ಕದಡುವ ಉದ್ದೇಶದಿಂದ ಒರ್ವ ದಲಿತ ಜಾತಿಗೆ ಸೇರಿದ ಕರ್ನಾಟಕ ರಾಜ್ಯದ ಮಾನ್ಯ ಗೃಹ ಮಂತ್ರಿಯವರು ದಲಿತ ಜಾತಿಗೆ ಸೇರಿದವರೆಂದು ತಿಳಿದರು ಕೂಡ ಅವರ ಜಾತಿಗೆ ಅವಹೇಳನ ಮಾಡುವ ರೀತಿಯಲ್ಲಿ ಕಮೆಂಟ್ ಬರೆದು ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಸಾಮಾಜಿಕ ಶಾಂತಿ ಮತ್ತು ಸಾಮರಸ್ಯಕ್ಕೆ ಹಾನಿ ಮಾಡುವ ಚಟುವಟಿಕೆಯಲ್ಲಿ ತೊಡಗಿ ದಲಿತ ಮಂತ್ರಿಯವರಿಗೆ ಜಾತಿ ನಿಂದನೇ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 82/2026 ಕಲಂ. 351(3), 196, 353(2)BNS ಹಾಗೂ 3(1) (r) (u) SC/ST Act ರಂತೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!