Monday, May 6, 2024
Homeತಾಜಾ ಸುದ್ದಿಡೊನಾಲ್ಡ್‌ ಟ್ರಂಪ್‌ ಮೊದಲ ಪತ್ನಿ ನಿಧನ: ಮೆಟ್ಟಿಲಿನಿಂದ ಕೆಳಗೆ ಬಿದ್ದು ಇವಾನಾ ಟ್ರಂಪ್‌ ಸಾವನ್ನಪ್ಪಿರುವ ಶಂಕೆ

ಡೊನಾಲ್ಡ್‌ ಟ್ರಂಪ್‌ ಮೊದಲ ಪತ್ನಿ ನಿಧನ: ಮೆಟ್ಟಿಲಿನಿಂದ ಕೆಳಗೆ ಬಿದ್ದು ಇವಾನಾ ಟ್ರಂಪ್‌ ಸಾವನ್ನಪ್ಪಿರುವ ಶಂಕೆ

spot_img
- Advertisement -
- Advertisement -

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್ ಗುರುವಾರ ತಮ್ಮ ಮ್ಯಾನ್‌ಹಟನ್‌ನ ಟೌನ್‌ಹೌಸ್‌ನಲ್ಲಿ ಮೆಟ್ಟಿಲಿಂದ ಕೆಳಗುರುಳಿ ಬಿದ್ದು ಮೃತಪಟ್ಟಿದ್ದಾರೆ.

ಅವರು ಗುರುವಾರ ಅಪರಾಹ್ನ ಸೇಂಟ್ ಟ್ರಫಪೇಜ್ ಗೇಟ್‌ವೇನಲ್ಲಿ ಹೇರ್‌ಸಲೂನ್ ಅಪಾಯಿಂಟ್‌ಮೆಂಟ್ ಹೊಂದಿದ್ದರು. ಅಲ್ಲಿಗೆ ಹೊರಡಲು ಸಿದ್ಧತೆ ನಡೆಸಿದ್ದರು. ಹಾಗೆ ಹೋಗಲು ಮೆಟ್ಟಿಲು ಇಳಿದಿದ್ದರು. ಮೆಟ್ಟಿಲಿಂದ ಜಾರಿ ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ಪರಿಶೀಲಿಸಿದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೆಟ್ಟಿಲಿಂದ ಜಾರಿ ಬಿದ್ದಾಗ ಹೃದಯ ಸ್ತಂಭನ ಅಥವಾ ಮಾರಣಾಂತಿಕ ಏಟು ಸಂಭವಿಸಿರುವ ಸಾಧ್ಯತೆ ಇದೆ. ಸಾವಿಗೆ ಕಾರಣ ಏನು ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ಡೇಲಿಮೇಲ್ ವರದಿ ಮಾಡಿದೆ.

ಮೂರು ಮಕ್ಕಳ ತಾಯಿ ಇವಾನಾ ಟ್ರಂಪ್ ಅವರು 73 ನೇ ವಯಸ್ಸಿನಲ್ಲಿ ನಿಧನರಾಗಿರುವ ಬಗ್ಗೆ ಸ್ವತಃ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಮಾಹಿತಿ ನೀಡಿದ್ದಾರೆ. ಟ್ರಂಪ್ ಟವರ್ ಸೇರಿದಂತೆ ಅವರ ಕಟ್ಟಡಗಳನ್ನು ನಿರ್ಮಿಸಲು ಇವಾನಾ ತನ್ನ ಪತಿಗೆ ಸಹಾಯ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸ್ಟೇಟಸ್ ಶೇರ್ ಮಾಡಿಕೊಂಡಿರುವ ಡೊನಾಲ್ಡ್ ಟ್ರಂಪ್, ಆಕೆ ಸುಂದರ ಮತ್ತು ಅದ್ಭುತ ಮಹಿಳೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.

- Advertisement -
spot_img

Latest News

error: Content is protected !!