Wednesday, July 15, 2026
Homeತಾಜಾ ಸುದ್ದಿಅಡುಗೆ ಅನಿಲದ ಬೆಲೆ ಮತ್ತೆ ಏರಿಕೆ

ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆ

- Advertisement -
- Advertisement -

ನವದೆಹಲಿ:ಗೃಹಬಳಕೆ ಮತ್ತು‌ ವಾಣಿಜ್ಯ ಎರಡೂ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಗೃಹ ಬಳಕೆಯ ಎಲ್‌ಪಿ ಜಿ ಸಿಲಿಂಡರ್ ಬೆಲೆಯಲ್ಲಿ 3.50 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯನ್ನು 8 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಬೆಲೆಯೇರಿಕೆ ಬಳಿಕ ದೇಶಾದ್ಯಂತ ಬಹುತೇಕ ಎಲ್ಲಾ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ.ಗಡಿ ದಾಟಿದೆ.ದೆಹಲಿ ಮತ್ತು ಮುಂಬೈನಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 1003 ರೂಪಾಯಿ ಆದರೆ ಕೋಲ್ಕತಾದಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 1029 ರೂ., ಚೆನ್ನೈನಲ್ಲಿ ಇಂದಿನಿಂದ 1018.5 ರೂಪಾಯಿಯಾಗಿದೆ.

ನಿರಂತರ ಬೆಲೆಯೇರಿಕೆಯಿಂದ ಜನರು ತತ್ತರಿಸಿದ್ದು ಇದೀಗ ಎಲ್ ಪಿಜಿ ಬೆಲೆ ಏರಿಕೆ ಮೂಲಕ ಮತ್ತೊಂದು ಬರೆ ಬಿದ್ದಿದೆ.

- Advertisement -

Latest News

error: Content is protected !!