Friday, May 10, 2024
Homeಕರಾವಳಿಜಿಲ್ಲಾ ಪೊಲೀಸ್ ಶ್ವಾನದ ದಳದ ಸ್ನಿಫರ್ ಡಾಗ್ ಕೊನೆಯುಸಿರು: ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

ಜಿಲ್ಲಾ ಪೊಲೀಸ್ ಶ್ವಾನದ ದಳದ ಸ್ನಿಫರ್ ಡಾಗ್ ಕೊನೆಯುಸಿರು: ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

spot_img
- Advertisement -
- Advertisement -

ಮಂಗಳೂರು : ನಗರದ ಪೊಲೀಸ್ ಪೇರೆಡ್ ಮೈದಾನದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಎನ್  ಶಶಿಕುಮಾರ್ ನೇತೃತ್ವದಲ್ಲಿ ಸಕಲ ಪೋಲೀಸ್ ಗೌರವದೊಂದಿದೆ ಅಂತ್ಯಸಂಸ್ಕಾರ ನಡೆಯಿತು. 2011 ರಂದು ಹುಟ್ಟಿದ ಶ್ವಾನ ಸುಧಾ 2012 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಡಾಬರ್ ಮೇನ್ ಪಿಂಚರ್ ಜಾತಿಗೆ ಸೇರಿದ ಈ ನಾಯಿಗೆ ಹತ್ತು ವರ್ಷ ಮೂರು ತಿಂಗಳು ವಯಸ್ಸಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸುಧಾಳಿಗೆ ಎದೆಭಾಗದಲ್ಲಿ ಕ್ಯಾನ್ಸರ್ ಟ್ಯೂಮರ್ ಅಗಿತ್ತು. ಅದಕ್ಕೆ ಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಅರೋಗ್ಯದಲ್ಲಿ ಸ್ಥಿರತೆ ಇತ್ತು. ಕಳೆದೊಂದು ವಾರದಿಂದ ಸುಧಾಳ ಅರೋಗ್ಯ ಹದೆಗೆಟ್ಟಿತ್ತು

ಚಿಕಿತ್ಸೆ ನಡೆಯುತ್ತಿದ್ದರೂ ಇಂದು ಬೆಳ್ಳಗೆ 10 ಸುಮಾರಿಗೆ ಮೃತಪಟ್ಟಿದೆ.ಅಂತ್ಯ ಸಂಸ್ಕಾರ ನೇರೆವೆರಿದ ಬಳಿಕ ಮಾತನಾಡಿದ ಪೊಲೀಸ್ ಅಯುಕ್ತ ಎನ್ ಶಶಿಕುಮಾರ್ ಪೊಲೀಸ್ ಶ್ವಾನ ದಳದ ಸ್ನಿಫರ್ ಡಾಗ್ ಸುಧಾ ಮೃತಪಟ್ಟಿರುವುದು ಬಹಳ ಬೇಸರದ ಸಂಗತಿ. ಇನ್ನೂ ಎರಡು ವರ್ಷಗಳ ಕಾಲ ಅದರ ಸೇವಾವಧಿ ಇತ್ತು. ಕಳೆದ ಒಂದು ವಾರದಿಂದ ಅರೋಗ್ಯ ಹದೆಗೆಟ್ಟ ಪರಿಣಾಮ ಎರಡು ದಿನಗಳಿಂದ ಅಹಾರವನ್ನು ತ್ಯಜಿಸಿತ್ತು. ಸುಮಾರು ಹತ್ತು ವರ್ಷ ಗಳ ಮಂಗಳೂರು ನಗರದ ಪೊಲೀಸ್ ಕಮಿಷನರ್ ರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿತ್ತು.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಯ ಶ್ವಾನ ಸಹಕರಿಸಿತ್ತು. ಎರಡು ಕೊಲೆ ಪ್ರಕರಣಗಳ ಮೃತದೇಹ ಪತ್ತೆಕಾರ್ಯ ಹಾಗೂ ಗಂಭೀರ ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಪ್ರಕರಣಗಳ ಪತ್ತೆಹಚ್ಚುವಲ್ಲಿ ಈ ಶ್ವಾನ ಸಹಕಾರಿಯಾಗಿತ್ತು. ಡಾಗ್ ಸ್ವ್ಕಾಡ್ನಲ್ಲಿ ಅತ್ಯಂತ ಚುರುಕಾದ ಶ್ವಾನ ಇದಾಗಿತ್ತು. ಆದಷ್ಟು ಶೀಘ್ರವಾಗಿ ಪರ್ಯಾಯವಾಗಿ ಮತ್ತೊಂದು ನಾಯಿಗೆ ತರಬೇತಿ ನೀಡಲಾಗುತ್ತದೆ.

- Advertisement -
spot_img

Latest News

error: Content is protected !!