Tuesday, December 3, 2024
Homeಉದ್ಯಮ"ಡಾಕ್ಟರ್​ರಿಂದ ಸಲಹಾ ಚೀಟಿ ತಂದರೆ ನಿಮಗೆ ಮದ್ಯ ಸಿಗುತ್ತದೆ"

“ಡಾಕ್ಟರ್​ರಿಂದ ಸಲಹಾ ಚೀಟಿ ತಂದರೆ ನಿಮಗೆ ಮದ್ಯ ಸಿಗುತ್ತದೆ”

spot_img
- Advertisement -
- Advertisement -

ಕೊರೋನಾ ಎಂಬ ಪೀಡೆ ಭಾರತಕ್ಕೆ ಪ್ರವೇಶವಾದ ತಕ್ಷಣವೇ ಜನರು ಮನೆಬಿಟ್ಟು ಹೊರಬರುವಂತಿಲ್ಲ, ವಾಣಿಜ್ಯ ಮಳಿಗೆಗಳು ತೆರೆಯುವಂತಿಲ್ಲ, ಬಾರ್​ಗಳನ್ನು ಮುಚ್ಚಬೇಕು ಹೀಗೆ ಹತ್ತಾರು ಕ್ರಮಗಳನ್ನು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ತೆಗೆದುಕೊಂಡು ಸೋಂಕಿಗೆ ಕಡಿವಾಣ ಹಾಕಲು ಮುಂದಾಗಿದೆ. ಆದರೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ಕೇರಳ ಸರ್ಕಾರ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ದುರಂತ ಎಂದರೆ ಕೆಲವರು ಬಾರ್​ನಲ್ಲಿ ಮದ್ಯ ಸಿಗುತ್ತಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ನಿನ್ನೆಯಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಕೇರಳ ಮೂಲದ ವ್ಯಕ್ತಿ ಸಾರಾಯಿ ಸಿಗದೇ ನೇಣು ಬೀಗಿದು ಆತ್ಮಹತ್ಯೆಗೆ ಶರಣಾಗಿದ್ದ. ಹೀಗೆ ಹಲವು ಘಟನೆಗಳು ಕೇರಳದಲ್ಲೂ ನಡೆದಿದೆ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರೋ ಕೇರಳ ಸರ್ಕಾರ ಡಾಕ್ಟರ್​ರಿಂದ ಸಲಹೆ ಚೀಟಿ ಪಡೆದವರು ಲಿಕ್ಕರ್ ಕೊಳ್ಳಲು ಅರ್ಹರು ಎಂದು ಹೇಳಿದೆ.

ಕೇರಳದ ಕಾಯಂಕುಳಂನಲ್ಲಿ ಇತ್ತೀಚೆಗೆ ಬಾರ್ಬರ್​ ಶಾಪ್​ನ ಹುಡುಗನೊಬ್ಬ ಲಿಕ್ಕರ್ ಸಿಗಲಿಲ್ಲವೆಂದು ಶೇವಿಂಗ್ ಲೋಷನ್ ಕುಡಿದು ಪ್ರಾಣ ಕಳೆದುಕೊಂಡಿದ್ದ.

- Advertisement -
spot_img

Latest News

error: Content is protected !!