Friday, May 24, 2024
Homeಕರಾವಳಿಕೊರೋನಾ ಜಾಗೃತಿ: ದೇಶದಲ್ಲಿ ಯಾವ ಜನಪ್ರತಿನಿಧಿ ಮಾಡದ ಕೆಲಸವನ್ನು ಮಾಡಿದ ಶಾಸಕ ಹರೀಶ್ ಪೂಂಜ

ಕೊರೋನಾ ಜಾಗೃತಿ: ದೇಶದಲ್ಲಿ ಯಾವ ಜನಪ್ರತಿನಿಧಿ ಮಾಡದ ಕೆಲಸವನ್ನು ಮಾಡಿದ ಶಾಸಕ ಹರೀಶ್ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ತಂಡ ಸಂಪೂರ್ಣ ಸಜ್ಜಾಗಿದ್ದು ಈಗಾಗಲೇ ತಾಲೂಕಿನಲ್ಲಿ ಕೊರೊನಾ ಸೋಂಕಿತ ಪತ್ತೆಯಾದ ಬೆನ್ನಲ್ಲೇ ತಾಲೂಕು ಆಡಳಿತ ಮಂಡಳಿ ಮತ್ತಷ್ಟು ಅಲರ್ಟ್ ಆಗಿದೆ.

ಶಾಸಕ ಹರೀಶ್ ಪೂಂಜಾ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿ ಕೊರೊನಾ ವಾರ್ ರೂಮ್ ಕೂಡ ಕಾರ್ಯನಿರ್ವಹಿಸುತ್ತಿದ್ದು, ಇದೀಗ ವಿಶೇಷವಾಗಿ ಹೊಸ ಆ್ಯಪ್ ಕೂಡ ಲಾಂಚ್ ಮಾಡಲಾಗಿದೆ. ದೇಶದಲ್ಲಿಯೇ ಇದೊಂದು ವಿನೂತನ ಪ್ರಯೋಗವಾಗಿದೆ ಎಂದು ಶಾಸಕರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೆಬ್ ಆ್ಯಪ್ ಅನ್ನು ಇಂದು (ಮಾರ್ಚ್ 29) ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ಮಿನಿ ವಿಧಾನಸೌಧದಲ್ಲಿರುವ ವಾರ್ ರೂಮ್ ನಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕಿನ ಪೊಲೀಸ್ ವೃತ್ತ ನಿರೀಕ್ಷಕರಾದ ಸಂದೇಶ್ ಹಾಗೂ ಆ್ಯಪ್ ಸಿದ್ಧಪಡಿಸಿದ ಅರವಿಂದ್ ಭಟ್ ಕೊಕ್ಕಡ, ಬಾಲಕೃಷ್ಣ ಶೆಟ್ಟಿ ಸೂರಿಂಜೆ, ತಾಲೂಕಿನ ಆರೋಗ್ಯಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಕೊರೊನ ಸೋಂಕು ಹೊಂದಿರುವರ ಜೊತೆ ಸಂಪರ್ಕ ಹೊಂದಿ, ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ಶಂಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಹೀಗೆ ಪರಿವೀಕ್ಷಣೆಯಲ್ಲಿರುವವರ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಬಳಕೆಗೆ ಬೆಳ್ತಂಗಡಿ ತಾಲೂಕು ಸಜ್ಜಾಗಿದೆ.

ಇವರನ್ನು ಮನೆಯಲ್ಲೇ ನಿಗಾ ಇರಿಸಲು ಕುಟುಂಬದವರು, ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯರು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆಪ್ ಬಿಡುಗಡೆ ಮಾಡಲಾಗಿದೆ. COVID-19 BLT DATABASE ಅನ್ನೊ ಈ ಆ್ಯಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆ್ಯಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ.

ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಲ್ಲಿರುವ ಕೋವಿಡ್ 19 ಗೃಹಪರಿವೀಕ್ಷಣೆಯಲ್ಲಿರುವವರ ಸಂಪೂರ್ಣ ವರದಿ ಇನ್ನುಮುಂದೆ ಈ ವಿಶೇಷ ವೆಬ್ ಆ್ಯಪ್ ನಲ್ಲಿ ಲಭ್ಯವಾಗಲಿದೆ. ದಿನಂಪ್ರತಿ ಆಶಾ ಕಾರ್ಯಕರ್ತೆಯರು ಹಾಗೂ ಬೀಟ್ ಪೊಲೀಸರು ಸಂಗ್ರಹಿಸಿದ ಮಾಹಿತಿಯನ್ನು ಈ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

ಹಾಗಾಗಿ ಪ್ರತಿಯೊಬ್ಬರು ತಮ್ಮ-ತಮ್ಮ ಮನೆಯಲ್ಲಿಯೇ ಕುಳಿತು ತಾಲೂಕಿನಲ್ಲಿ ಕೊರೊನಾ ಶಂಕಿತರಾಗಿ ಗೃಹಬಂಧನದಲ್ಲಿರುವವರ ಹಾಗೂ ಅವರ ಮನೆಯವರ ಆರೋಗ್ಯದ ಬಗೆಗಿರುವ ಮಾಹಿತಿಯನ್ನು ಅಂಗೈಯಲ್ಲಿರುವ ಮೊಬೈಲ್ ಮೂಲಕ ಸಂಗ್ರಹಿಸಬಹುದಾಗಿದೆ.

ಈ ಅಪ್ ಕೋವಿಡ್ 19 (ಕೊರೊನಾ ವೈರಸ್) ಶಂಕಿತರನ್ನು ಟ್ರ್ಯಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ. ‘ಐಸರ್ಚ್ ಸೊಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್’ ಸಂಸ್ಥೆಯು ಈ ವೆಬ್ ಆ್ಯಪ್ ಅನ್ನು ಸಿದ್ಧಪಡಿಸಿದ್ದು, ‘ಕಿಯೋನಿಕ್ಸ್ ಬಿಸಿನೆಸ್’ ಇದರ ಸಹಭಾಗಿತ್ವ ವಹಿಸಿಕೊಂಡಿದೆ. ನಾಳೆಯಿಂದ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಾಗಲಿದ್ದು, ತಾಲೂಕಿನ ಜನತೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

- Advertisement -
spot_img

Latest News

error: Content is protected !!