ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ಸ್ಯ ತೀರ್ಥ ಪ್ರಖ್ಯಾತ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೆಶ್ವರ ಸನ್ನಿಧಾನ ಭಕ್ತರಿಗೆ ದರ್ಶನಕ್ಕೆ ತೆರೆದಿರದ ಕಾರಣ, ದೇವಸ್ಥಾನಕ್ಕೆ ತಾಗಿಕೊಂಡಿರುವ ಕಪಿಲಾ ನದಿಯ ಸಾವಿರಾರು ದೇವರ ಮೀನುಗಳು ಆಹಾರಕ್ಕಾಗಿ ಪರಿತಪಿಸುವ ಸಂದರ್ಭ ಉಂಟಾಗಿದೆ. ದಿನ ನಿತ್ಯ ಭಕ್ತರಲ್ಲದೆ ಸಾವಿರಾರು ಪ್ರವಾಸಿಗರು ಬಂದು ಅಕ್ಕಿ , ಅರಳುಗಳನ್ನು ಮೀನುಗಳಿಗೆ ಅರ್ಪಿಸುತ್ತಿದ್ದರು.
ಇದೀಗ ಮೀನುಗಳಿಗೆ ಆಹಾರದ ಮೂಲವಾಗಿದ್ದ ಪ್ರವಾಸಿಗರು ಮತ್ತು ಭಕ್ತಾದಿಗಳಿಲ್ಲದೆ ದೇವಸ್ಥಾನ ಭುಣುಗುಟ್ತುತ್ತಿದೆ. ಮೀನುಗಳನ್ನು ನೋಡಿ ಸಂತೊಷ ಪಡುವ ಮಕ್ಕಳಿಲ್ಲ. ತಿಂಡಿ ಹಾಕಿದಾಗ ಆಟವಾಡುತ್ತಿರುವ ಮೀನುಗಳೂ ನಿಶ್ಯಬ್ದ ಆಗಿದೆ ಎಂದು ಪರಿಸರ ಪ್ರೆಮಿ, ಮತ್ಸ್ಯ ಹಿತರಕ್ಷಣಾ ಸಮಿತಿಯ ಅದ್ಯಕ್ಷ, ಶಿಶಿಲ ಜಯರಾಮ ನೆಲ್ಲಿತ್ತಾಯ ಅಭಿಪ್ರಾಯ ಪಟ್ಟಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿತ ಕ್ಷೇತ್ರವಾಗಿರುವ ಶಿಶಿಲ ಕ್ಷೇತ್ರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಗಮನ ಹರಿಸಿದರೆ ಅಳಿವಿನಂಚಿನಲ್ಲಿರುವ ಮತ್ಸ್ಯ ಸಂಕುಲದ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ.