- Advertisement -
- Advertisement -
ಬಜಪೆ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ಮಂಗಳೂರು ತಾಲೂಕಿನ ಬಜ್ಪೆ ಪರಿಸರದಲ್ಲಿ ಹಗಲು ರಾತ್ರಿಯೆನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಬಜಪೆ ಭಜರಂಗ ದಳದ ವತಿಯಿಂದ ನೀರಿನ ಬಾಟಲ್ ಮತ್ತು ಸಿಹಿ ತಿಂಡಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಇದಷ್ಟಲ್ಲದೆ ದಿನನಿತ್ಯ ಬೇಕಾಗುವ ದಿನಸಿ ಸಾಮಾನಿಗಾಗಿ ಪೇಟೆಗೆ ಬರಲಾಗದ ಅಸಕ್ತ ಬಡಕುಟುಂಬಗಳಿಗೆ ಅಕ್ಕಿ ಇನ್ನಿತರ ದವಸ ಧಾನ್ಯಗಳನ್ನು ಮನೆಗಳಿಗೆ ತಲುಪಿಸುವ ಮಹಾಕಾರ್ಯವನ್ನು ಈ ಭಾಗದ ಭಜರಂಗದಳ ಸಂಘಟನೆಯ ಕಾರ್ಯಕರ್ತರು ಮಾಡುತ್ತಿದ್ದಾರೆ.
ಈ ಕಾರ್ಯದ ಮುಂದಾಳತ್ವವನ್ನು ಬಜಪೆ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಕಾರ್ಯದರ್ಶಿ
ದುರ್ಗಾಪ್ರಸಾದ್ ಕೋಟ್ಯಾನ್ , ಪ್ರಮುಖರಾದ ಅಭಿಷೇಕ್ ಮುರನಗರ, ಸುಶಾಂತ್ ಸುವರ್ಣ ಮತ್ತು ಅನೇಕ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ..
- Advertisement -