Friday, October 11, 2024
Homeಉದ್ಯಮಕಾರ್, ದ್ವಿಚಕ್ರ ವಾಹನಗಳ ಮಾಲೀಕರಿಗೆ ಭರ್ಜರಿ 'ಗುಡ್ ನ್ಯೂಸ್ʼ

ಕಾರ್, ದ್ವಿಚಕ್ರ ವಾಹನಗಳ ಮಾಲೀಕರಿಗೆ ಭರ್ಜರಿ ‘ಗುಡ್ ನ್ಯೂಸ್ʼ

spot_img
- Advertisement -
- Advertisement -

ಬೈಕ್ ಸೇರಿದಂತೆ ದ್ವಿಚಕ್ರವಾಹನ, ಕಾರ್ ಮೊದಲಾದ ವಾಹನಗಳ ಮಾಲೀಕರಿಗೆ ವಿಮೆ ಮಾರುಕಟ್ಟೆ ನಿಯಂತ್ರಕ(ಐ.ಆರ್.ಡಿ.ಎ.ಐ.) ವತಿಯಿಂದ ಸಿಹಿ ಸುದ್ದಿ ಸಿಕ್ಕಿದೆ. 2020 -21 ನೇ ಸಾಲಿನ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರ ಏರಿಕೆಯನ್ನು ಐ.ಆರ್.ಡಿ.ಎ.ಐ. ತಡೆ ಹಿಡಿದಿದೆ. 2019- 21 ಅವಧಿಯ ಪ್ರೀಮಿಯಂ ದರ ಮಾರ್ಚ್ 31 ರ ನಂತರವೂ ಮುಂದಿನ ಪರಿಷ್ಕರಣೆಯವರೆಗೂ ಚಾಲ್ತಿಯಲ್ಲಿ ಇರಲಿವೆ ಎಂದು ಐ.ಆರ್.ಡಿ.ಎ.ಐ. ತಿಳಿಸಿದೆ.

ಎಲ್ಲ ವಿಮೆ ಕಂಪನಿಗಳು 2020 ರ ಏಪ್ರಿಲ್ 1 ರ ನಂತರ ಪ್ರಸ್ತುತ ಇರುವ ಪ್ರೀಮಿಯಂ ದರವನ್ನೇ ಮುಂದಿನ ಪರಿಷ್ಕರಣೆಯವರೆಗೂ ಪಡೆಯಬೇಕಿದೆ. ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!