Wednesday, June 24, 2026
HomeWorldಶೀಘ್ರದಲ್ಲೇ ಮಂಗಳೂರು ಮೂಲದ ಉದ್ಯಮಿಯಿಂದ ಸ್ಕ್ಯಾನ್ ಜೆಟ್ ವಿಮಾನ ಸೇವೆ; ವಿಜಯ್ ಮಲ್ಯ ಬಳಿಕ ವಿಮಾನ...

ಶೀಘ್ರದಲ್ಲೇ ಮಂಗಳೂರು ಮೂಲದ ಉದ್ಯಮಿಯಿಂದ ಸ್ಕ್ಯಾನ್ ಜೆಟ್ ವಿಮಾನ ಸೇವೆ; ವಿಜಯ್ ಮಲ್ಯ ಬಳಿಕ ವಿಮಾನ ಯಾನ ಕ್ಷೇತ್ರಕ್ಕೆ ಮತ್ತೊಬ್ಬ ಕರಾವಳಿಗ

- Advertisement -
- Advertisement -

ಮಂಗಳೂರು ಮೂಲದ ಉದ್ಯಮಿಯೊಬ್ಬರು ಹೊಸತಾಗಿ ವಿಮಾನ ಯಾನ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಸ್ಕ್ಯಾನ್ ಜೆಟ್ ಹೆಸರಿನಲ್ಲಿ ಹೊಸದೊಂದು ವಿಮಾನ ಶೀಘ್ರದಲ್ಲೇ ಪ್ರಾದೇಶಿಕವಾಗಿ ಸೇವೆ ಆರಂಭಿಸಲಿದೆ.

ಭಾರತದಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ ಸಂಸ್ಥೆಗಳದ್ದೇ ಕಾರುಬಾರು. ಆದರೆ ಇಂಥ ದೊಡ್ಡ ಕಂಪನಿಗಳ ನಡುವೆ ಸ್ಕ್ಯಾನ್ ರೇ ಎಂಬ ಸಂಸ್ಥೆ ವಿಮಾನ ಯಾನ ಕ್ಷೇತ್ರಕ್ಕೆ ಕೈಹಾಕಿದೆ.

ಮಂಗಳೂರು ಹೊರವಲಯದ ಗುರುಪುರ ಬಳಿಯ ಕಂದಾವರ ಮೂಲದ ಉದ್ಯಮಿ ವಿಶ್ವಪ್ರಸಾದ್ ಆಳ್ವ ಅವರ ಸ್ಕ್ಯಾನ್ ರೇ ಸಂಸ್ಥೆಯು ಮೈಸೂರಿನಲ್ಲಿ ಆರಂಭಗೊಂಡು ಪ್ರಸಕ್ತ ಜಗತ್ತಿನ 80ಕ್ಕೂ ಹೆಚ್ಚು ದೇಶಗಳಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ಪೂರೈಸುತ್ತಿದೆ. ಇದೀಗ ಈ ಕಂಪನಿಯು ಸುಮಾರು 200 ಕೋಟಿ ಹೂಡಿಕೆ ಮಾಡಿ ವಿಮಾನ ಸೇವೆಗೆ ಮುಂದಾಗಿದೆ.

- Advertisement -

Latest News

error: Content is protected !!