Wednesday, June 24, 2026
Homeತಾಜಾ ಸುದ್ದಿಜನವರಿ 1, 26ರಿಂದ ಮತ್ಸ್ಯಗಂಧ ರೈಲು ಪ್ರಯಾಣದಲ್ಲಿ ವ್ಯತ್ಯಯ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ..

ಜನವರಿ 1, 26ರಿಂದ ಮತ್ಸ್ಯಗಂಧ ರೈಲು ಪ್ರಯಾಣದಲ್ಲಿ ವ್ಯತ್ಯಯ; ಇಲ್ಲಿದೆ ನೋಡಿ ಪೂರ್ತಿ ಮಾಹಿತಿ..

- Advertisement -
- Advertisement -

ಕರ್ನಾಟಕ ಮತ್ತು ಕೇರಳದಿಂದ ಮುಂಬೈಗೆ ಸಂಚರಿಸುವ ಪ್ರಮುಖ ರೈಲುಗಳ ಸೇವೆಯಲ್ಲಿ ತುರ್ತು ನಿರ್ವಹಣಾ ಕಾರಣದಿಂದಾಗಿ ಜನವರಿ ತಿಂಗಳ ಪೂರ್ತಿ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ.

2026ರ ಜನವರಿ 1 ರಿಂದ ಜನವರಿ 30 ರವರೆಗೆ 30 ದಿನಗಳ ಕಾಲ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ರೈಲ್ವೆ ಯಾರ್ಡ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧವನ್ನ ವಿಧಿಸಲಾಗಿದೆ. ಈ ಕಾರಣದಿಂದಾಗಿ ಮಂಗಳೂರು ಮತ್ತು ಕೇರಳ ಭಾಗದಿಂದ ಬರುವ ರೈಲುಗಳನ್ನು ಪನ್ವೇಲ್ ನಿಲ್ದಾಣದಲ್ಲೇ ಸ್ಥಗಿತಗೊಳಿಸಲು ಮತ್ತು ಅಲ್ಲಿಂದಲೇ ಮರಳಿ ಆರಂಭಿಸಲು ನಿರ್ಧರಿಸಲಾಗಿದೆ.

​ಪನ್ವೇಲ್‌ನಲ್ಲಿ ಮುಕ್ತಾಯಗೊಳ್ಳುವ ರೈಲುಗಳು ವಿವರ:

​ನೇತ್ರಾವತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16346): ಡಿಸೆಂಬರ್ 31, 2025 ರಿಂದ ಜನವರಿ 29, 2026 ರವರೆಗೆತಿರುವನಂತಪುರಂನಿಂದ ಮುಂಬೈಗೆ ಬರುವ ಈ ರೈಲು ಪನ್ವೇಲ್ ನಿಲ್ದಾಣದಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಪನ್ವೇಲ್ ಮತ್ತು LTT ನಡುವೆ ಈ ರೈಲು ಸಂಚರಿಸುವುದಿಲ್ಲ.
​ಮತ್ಸ್ಯಗಂಧ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12620): ಡಿಸೆಂಬರ್ 31, 2025 ರಿಂದ ಜನವರಿ 29, 2026 ರವರೆಗೆ ಮಂಗಳೂರಿನಿಂದ ಹೊರಡುವ ಈ ದೈನಂದಿನ ರೈಲು ಪನ್ವೇಲ್ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
​2. ಪನ್ವೇಲ್‌ನಿಂದಲೇ ಆರಂಭವಾಗುವ ರೈಲುಗಳು: ಜನವರಿ 2, 2026 ರಿಂದ ಜನವರಿ 31, 2026 ರವರೆಗೆ ​ನೇತ್ರಾವತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16345): ಮುಂಬೈನಿಂದ ಹೊರಡಬೇಕಾದ ಈ ರೈಲು LTT ಬದಲಿಗೆ ಪನ್ವೇಲ್ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ.

ಮತ್ಸ್ಯಗಂಧ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12619): ಜನವರಿ 1, 2026 ರಿಂದ ಜನವರಿ 31, 2026 ರವರೆಗೆ ಈ ರೈಲು ಲೋಕಮಾನ್ಯ ತಿಲಕ್ ಟರ್ಮಿನಸ್ ಬದಲಿಗೆ ಪನ್ವೇಲ್ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಮಂಗಳೂರಿನತ್ತ ಪ್ರಯಾಣ ಬೆಳೆಸಲಿದೆ.

ಈ ಬದಲಾವಣೆಯಿಂದಾಗಿ ಮುಂಬೈ ನಗರದ ಕೇಂದ್ರ ಭಾಗಕ್ಕೆ ತೆರಳುವ ಪ್ರಯಾಣಿಕರು ಪನ್ವೇಲ್‌ನಿಂದ ಉಪನಗರ ರೈಲುಗಳನ್ನು ಅವಲಂಬಿಸಬೇಕಾಗುತ್ತದೆ. ನಿರ್ವಹಣಾ ಕಾರ್ಯದಿಂದ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲಕ್ಕೆ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನರಕರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!