ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ. ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೇಗನೇ ಫಲಿತಾಂಶ ಸಿಗುತ್ತದೆ.
ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿಕೊಳ್ಳಿ. ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ ಹಾಕಿ ನಂತರ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಕುದಿಸಿ ಸೋಸಿಕೊಂಡು ಕುಡಿದರೆ ಕ್ರಮೇಣ ತೂಕ ಇಳಿಕೆಯಾಗುತ್ತದೆ. 2 ಗ್ಲಾಸ್ ನೀರಿಗೆ 10 ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ. ಕರಿಬೇವು ಬಣ್ಣ ಬಿಡುವವರೆಗೆ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ. ನಂತರ ನೀರನ್ನು ಸೋಸಿಕೊಳ್ಳಿ. ಉಗುರು ಬೆಚ್ಚಗಿನ ನೀರಿಗೆ ಅರ್ಧ ಲಿಂಬೆ ಹಣ್ಣು ಹಿಂಡಿ ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.
ಕರಿಬೇವು ಹಾಗೂ ಲಿಂಬೆ ಹಣ್ಣು ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.