- Advertisement -
- Advertisement -
ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ ಕಿರಿಕಿರಿ ಅನುಭವಿಸುತ್ತಾರೆ. ತುಂಬಾ ಸುಲಭವಾಗಿ ಈ ಕಂಕುಳ ಭಾಗದ ಕಪ್ಪನ್ನು ನಿವಾರಿಸಿಕೊಳ್ಳಲು ಇಲ್ಲಿದೆ ನೋಡಿ ಒಂದು ಸೂಪರ್ ಮನೆಮದ್ದು.
- ಒಂದು ಬೌಲ್ ತಗೆದುಕೊಂಡು ಅದಕ್ಕೆ 3 ದೊಡ್ಡ ಚಮಚ ಹಸಿಹಾಲು ಹಾಕಿ. ಅದಕ್ಕೆ 2 ಚಮಚ ಬೇಕಿಂಗ್ ಸೋಡಾ ಹಾಕಿ. ನಂತರ 2 ಚಮಚ ಅಲೋವೆರಾ ಜೆಲ್ ಹಾಗೂ ಒಂದು ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. ಇನ್ನು ನಿಮ್ಮ ಕಂಕುಳ ಭಾಗವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಂಡು ನೀರಿನ ಪಸೆ ಇರದಂತೆ ಒಂದು ಬಟ್ಟೆಯಿಂದ ಒರೆಸಿಕೊಳ್ಳಿ. ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಿಂದ ತೆಗೆದುಕೊಂಡು ನಿಧಾನಕ್ಕೆ ಕಂಕುಳ ಭಾಗದಲ್ಲಿ ಮಸಾಜ್ ಮಾಡಿ. 15 ನಿಮಿಷ ಈ ಪ್ಯಾಕ್ ಅನ್ನು ಹಾಗೇಯೇ ಬಿಡಿ. ಆಮೇಲೆ ತಣ್ಣಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.
- ಮೊದಲಿಗೆ ನಿಮ್ಮ ಕಂಕುಳ ಭಾಗದ ಕೂದಲನ್ನು ಒಂದು ದಿನದ ಹಿಂದೆಯೇ ಶೇವ್ ಮಾಡಿಕೊಳ್ಳಿ. ಮರುದಿನ ಒಂದು ಬೌಲ್ ಗೆ ಅರ್ಧ ಚಮಚದಷ್ಟು ಬಿಳಿ ಬಣ್ಣದ ಟೂತ್ ಪೇಸ್ಟ್, ಅರ್ಧ ಚಮಚದ್ಟು ಬೇಕಿಂಗ್ ಸೋಡಾ, ಒಂದು ಚಮಚದಷ್ಟು ಅಲೋವೆರಾ ಜೆಲ್, ಒಂದು ಚಮಚದಷ್ಟು ತೆಂಗಿನೆಣ್ಣೆ, ಅರ್ಧ ಚಮಚದಷ್ಟು ಲಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಕಂಕುಳ ಭಾಗಕ್ಕೆ ಹಚ್ಚಿ. ಹತ್ತು ನಿಮಿಷ ಹಾಗೇಯೇ ಬಿಡಿ. ನಂತರ ಶುದ್ಧವಾದ ನೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿ ಅಲೋವೆರಾ ಜೆಲ್ ಹಚ್ಚಿಕೊಳ್ಳಿ. ಸೂಕ್ಷ್ಮ ತ್ವಚೆಯವರು ಒಮ್ಮೆ ಪರೀಕ್ಷಿಸಿ ಹಚ್ಚಿಕೊಳ್ಳಿ. ಉರಿ ಬಂದರೆ ತಕ್ಷಣವೇ ತೊಳೆದುಬಿಡಿ.
- Advertisement -