- Advertisement -
- Advertisement -
ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕಿಗೆ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವುದು ಮಹಾರಾಷ್ಟ್ರ. ಆ ಕಾರಣದಿಂದ ಜನರಿಗೆ ನೆರವಾಗುವ ದೃಷ್ಟಿಯಲ್ಲಿ ಮುಂಬೈ ಮೂಲದ ಅಜಿಂಕ್ಯ ರಹಾನೆ ಹತ್ತು ಲಕ್ಷ ರೂ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 50 ಲಕ್ಷ ರೂ ನೀಡಿದ್ದರೆ, ಎಡಗೈ ಆಟಗಾರ ಸುರೇಶ್ ರೈನಾ 52 ಲಕ್ಷ ರೂ ನೀಡಿದ್ದಾರೆ. ದೇಶದಾದ್ಯಂತ ಕ್ರೀಡಾಪಟುಗಳು, ಸಿನಿಮಾ ನಟರು ಜನರ ಒಳಿತಿಗಾಗಿ ಪರಿಹಾರ ನಿಧಿಗೆ ಹಣ ನೀಡುತ್ತಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಹಾರಾಷ್ಟ್ರದ ಪುಣೆಯ ದಿನಗೂಲಿ ನೌಕರರಿಗಾಗಿ ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿ 1 ಲಕ್ಷ ರೂ. ನೆರವನ್ನು ನೀಡಿದ್ದಾರೆ. ಪುಣೆಯ ಸರ್ಕಾರೇತರ ಸಂಘ ಸಂಸ್ಥೆ (ಎನ್‌ಜಿಒ) “ಮುಕುಲ್ ಮಹದೇವ್ ಫೌಂಡೇಷನ್’ಗೆ ಈ ಹಣ ನೀಡಿದ್ದಾರೆ.
- Advertisement -