Thursday, June 25, 2026
Homeಕ್ರೀಡೆಆರ್​ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್​ಕೆ ಮ್ಯಾನೇಜ್ಮೆಂಟ್ ನಿಂದ ದೂರು

ಆರ್​ಸಿಬಿ ವಿರುದ್ಧ ಬಿಸಿಸಿಐಗೆ ಸಿಎಸ್​ಕೆ ಮ್ಯಾನೇಜ್ಮೆಂಟ್ ನಿಂದ ದೂರು

- Advertisement -
- Advertisement -

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 5 ರಂದು ನಡೆದ ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಆರ್​ಸಿಬಿ ಡಿಜೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನು ಹಾಗೂ ಅಭಿಮಾನಿಗಳನ್ನು ಅವಮಾನಿಸಿದ್ದಾರೆ ಎಂದು ಸಿಎಸ್​ಕೆ ಮ್ಯಾನೇಜ್ಮೆಂಟ್ ಬಿಸಿಸಿಐಗೆ ದೂರು ನೀಡಿದೆ.

ಇನ್ನು  ಸಿಎಸ್​ಕೆ ನೀಡಿದಂತಹ ದೂರಿನಲ್ಲಿ “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು   ತಿಳಿಸಲಾಗಿದೆ.

ಇನ್ನು ಕಳೆದ ಬಾರಿ ಇಂತಹದ್ದೇ  ಅತಿರೇಕದ ವರ್ತನೆಯನ್ನು ಸಿಎಸ್​ಕೆ ಡಿಜೆ ಕೂಡ ತೋರಿದ್ದರು. ಐಪಿಎಲ್ 2025ರ ವೇಳೆ ಆರ್​ಸಿಬಿ ನಡೆಸಿದ ಚಿಟ್​ ಚಾಟ್​ನಲ್ಲಿ “ಚೆನ್ನೈ ಎಂದ ತಕ್ಷಣ ನಿಮ್ಮ ನೆನಪಿಗೆ ಬರುವುದು ಏನು?” ಎಂದು ಕೇಳಲಾಗಿತ್ತು. ಈ ವೇಳೆ ಜಿತೇಶ್ ಶರ್ಮಾ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಎಂಬ ಹಾಡನ್ನು ಅತಿರಂಜಿತ ಧಾಟಿಯಲ್ಲಿ ಹಾಡಿದ್ದರು.ಇದಕ್ಕೆ ಪ್ರತಿಯಾಗಿ ಚೆನ್ನೈನ ಚೇಪಾಕ್ ಕ್ರೀಡಾಂಗಣದಲ್ಲಿಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಔಟಾಗುತ್ತಿದ್ದಂತೆ ಸಿಎಸ್‌ಕೆ ಡಿಜೆ “ದೋಸಾ, ಇಡ್ಲಿ, ಸಾಂಬಾರ್, ಚಟ್ನಿ ಚಟ್ನಿ” ಹಾಡನ್ನು ಪ್ಲೇ ಮಾಡಿ ತಿರುಗೇಟು ನೀಡಿದ್ದರು.

ಇದೀಗ ಆರ್​ಸಿಬಿ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಅವಹೇಳನ ಮಾಡಿದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ಹೀಯಾಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಜಿತೇಶ್ ಶರ್ಮಾ ಅವರನ್ನು ಅವಮಾನಿಸಿದ ಸಿಎಸ್​ಕೆ ಡಿಜೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದು ಸುಮ್ಮನಿದ್ದ ಸಿಎಸ್​ಕೆ ಇಂದು ಅವಮಾನವಾಗಿದೆ ಎನ್ನುತ್ತಿರುವುದು ನ್ಯಾಯವೇ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!