Tuesday, June 9, 2026
Homeಕರಾವಳಿಮಂಗಳೂರುಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಅಕ್ರಮ - ಸಕ್ರಮ ಸಮಿತಿ ಸಭೆ; ಅರ್ಹ 28  ಮಂದಿ ಫಲಾನುಭವಿಗಳಿಗೆ...

ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಅಕ್ರಮ – ಸಕ್ರಮ ಸಮಿತಿ ಸಭೆ; ಅರ್ಹ 28  ಮಂದಿ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ ವಿತರಣೆ

- Advertisement -
- Advertisement -

ಬೆಳ್ತಂಗಡಿ:  ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸಭೆ ಜೂ. 4 ರಂದು ನಡೆಯಿತು. ಸಭೆಯಲ್ಲಿ ಒಟ್ಟು 10  ಅರ್ಜಿಗಳ  ವಿಲೇಗೆ  ಪರಿಶೀಲನೆ ನಡೆಸಲಾಯಿತು.  ಈ ಸಂಧರ್ಭ ಶಾಸಕರು ಅರ್ಹ 28  ಮಂದಿ  ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಿಸಿದರು.  ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಅಯ್ಯೂಬ್ ಬಿ. ಕೆ.,  ವಿನುತಾ ರಜತ್ ಗೌಡ ಉಜಿರೆ ಹಾಗೂ ಶ್ರೀಧರ್ ಕಳೆಂಜ  ಸಮಿತಿ ಕಾರ್ಯದರ್ಶಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಉಪಸ್ಥಿತರಿದ್ದರು.

ಸಭೆಯಲ್ಲಿ  ಅರ್ಜಿದಾರರ ಬಳಿ ಶಾಸಕ ಹರೀಶ್ ಪೂಂಜರು ಕಡತ ವಿಲೇವಾರಿಗೆ ಅಧಿಕಾರಿಗಳಿಗೆ  ಮಧ್ಯವರ್ತಿಗಳಿಗೆ  ಹಣ ನೀಡಿದ್ದೀರಾ ಎಂದು  ಪ್ರತಿಯೊಬ್ಬ ಅರ್ಜಿದಾರರ  ಬಳಿ ಕೇಳಿದರು. ಹಣ ಪಾವತಿಸಿದ್ದಲ್ಲಿ ಆ ಮೊತ್ತವನ್ನು ವಾಪಸು ತೆಗಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

- Advertisement -

Latest News

error: Content is protected !!