- Advertisement -
- Advertisement -
ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂದೂ ಮಾಡದ ಕೆಲಸಗಳಿಗೆ ಕೈ ಹಾಕಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಆದರೆ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೀಗೆ ಮಾಡಲು ಹೋಗಿ ಟ್ರೋಲ್ ಗೊಳಗಾಗಿದ್ದಾರೆ. ಸೈನಾ ತಮ್ಮ ಫೇಸ್ ಬುಕ್ ನಲ್ಲಿ ಮನೆ ಎದುರು ಕಸ ಗುಡಿಸುತ್ತಿರುವ ವಿಡಿಯೋ ಒಂದನ್ನು ಹಾಕಿ ಕಸ ಗುಡಿಸುವುದು ಎಷ್ಟು ಕಷ್ಟ, ಅಮ್ಮ ಯಾಕೆ ಪ್ರತೀ ಬಾರಿ ಕಸ ಗುಡಿಸುವಾಗಲೂ ಬೈತಾರೆ ಎಂದು ಈಗ ಗೊತ್ತಾಗಿದೆ ಎಂದು ಬರೆದುಕೊಂಡಿದ್ದರು.
ಆದರೆ ಸೈನಾ ಹಾಕಿದ ಈ ವಿಡಿಯೋ ಅವರಿಗೇ ತಿರುಗುಬಾಣವಾಗಿದೆ. ಕಸ ಎಲ್ಲಾ ಕೆಲಸದಾಕೆ ಗುಡಿಸಿ ಕೊನೆಯಲ್ಲಿ ಕ್ಯಾಮರಾಗೋಸ್ಕರ ಕಸಬರಿಕೆ ಹಿಡಿದಿದ್ದೀರಿ ಎಂದು ಕೆಲವರು ಕಾಲೆಳೆದರೆ ಮತ್ತೆ ಕೆಲವರು ನಿಜವಾಗಿಯೂ ಕ್ಲೀನಿಂಗ್ ಮಾಡುತ್ತಿದ್ದರೆ ಈ ರೀತಿ ಮನೆ ಹೊರಗೆ ಬಂದು ಕ್ಯಾಮರಾಗೆ ಪೋಸ್ ನೀಡುವುದೇಕೆ ಎಂದು ಟ್ರೋಲ್ ಮಾಡಿದ್ದಾರೆ.
- Advertisement -