Wednesday, June 24, 2026
Homeಕ್ರೀಡೆಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ವಿದಾಯ

ಟೆಸ್ಟ್‌ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ವಿದಾಯ

- Advertisement -
- Advertisement -

ಮುಂಬೈ: ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ.

14 ವರ್ಷಗಳ ವೃತ್ತಿ ಜೀವನದ ನಂತರ ವಿರಾಟ್‌ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನು ಮೊದಲ ಬಾರಿಗೆ ಗುಡ್ಡೆಯ ನೀಲಿ ಜರ್ಸಿ ಧರಿಸಿ 14 ವರ್ಷಗಳಾಗಿವೆ. ನಿಜವಾಗಿಯೂ ಈ ಸ್ವರೂಪವು ನನ್ನನ್ನು ಎಲ್ಲಿ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ. ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ. ಸದ್ದಿಲ್ಲದ ಕಠಿಣ ಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಶಾಶ್ವತವಾಗಿ ನಿಮ್ಮೊಂದಿಗಿರುವ ಸಣ್ಣ ಕ್ಷಣಗಳು. ನಾನು ಯಾವಾಗಲೂ ನನ್ನ ಟೆಸ್ಟ್‌ ವೃತ್ತಿಜೀವನವನ್ನು ಮಂದಹಾಸದೊಂದಿಗೆ ನೆನಪಿಸಿಕೊಳ್ಳುತ್ತೇನೆ,’ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!