ನ್ಯೂಸ್ ಡೆಸ್ಕ್; 18 ವರ್ಷಗಳ ಬಳಿಕ ಆರ್ ಸಿಬಿ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದಕ್ಕೆ ಆರ್ ಸಿಬಿ ತಂಡದ ಮಾಜಿ ಮಾಲೀಕ ಮದ್ಯದೊರೆ ವಿಜಯ್ ಮಲ್ಯ ಟ್ವೀಟ್ ಮೂಲಕ ಶುಭ ಹಾರೈಸಿದ್ದರು. ಆರ್‌ಸಿಬಿ ಟೀಮ್ ಕೊನೆಗೂ 18 ವರ್ಷಗಳ ಬಳಿಕ ಚಾಂಪಿಯನ್ಸ್ ಆಗಿದೆ. 2025ರ ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತುಂಬ ಚೆನ್ನಾಗಿ ಆಡಿದೆ. ಅತ್ಯುತ್ತಮ ತರಬೇತಿ ಮತ್ತು ಸಹಾಯಕ ಸಿಬ್ಬಂದಿ ಸಹಕಾರದೊಂದಿಗೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆʼ ಈ ಸಲ ಕಪ್ ನಮ್ಮದೆ’ ಎಂದಿದ್ದರು.
ʼ ಹಾಗೇಯೇ ಅವರು ಇನ್ನೊಂದು ಪೋಸ್ಟ್ ಬರೆದು “ನಾನು ಆರ್‌ಸಿಬಿಯನ್ನ ಸ್ಥಾಪಿಸಿದಾಗ, ಬೆಂಗಳೂರು ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂಬುದು ನನ್ನ ಕನಸಾಗಿತ್ತು. ಕಿಂಗ್ ಕೊಹ್ಲಿಯನ್ನು ಆಯ್ಕೆ ಮಾಡುವ ಸೌಭಾಗ್ಯ ನಾನು ಪಡೆದಿದ್ದೆ. ಅಂದು ನಾನು ಆಯ್ಕೆ ಮಾಡಿಕೊಂಡ ಬಳಿಕ 18 ವರ್ಷಗಳ ಕಾಲ ಅವರು ಆರ್‌ಸಿಬಿ ಜೊತೆಗೇ ಇದ್ದಾರೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು ಆರ್‌ಸಿಬಿ ಪಾಲಿಗೆ ಅಳಿಸಲಾಗದ ಇತಿಹಾಸ ಆಗಿರುವ ಎಬಿ ಡಿವಿಲಿಯರ್ಸ್’ರನ್ನೂ ಆಯ್ಕೆ ಮಾಡಿದ್ದೆ. ಈಗ ಅಂತಿಮವಾಗಿ ಟ್ರೋಫಿ ಬೆಂಗಳೂರಿಗೆ ಬರುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಅತ್ಯುತ್ತಮರು ಮತ್ತು ಅವರು ಐಪಿಎಲ್ ಟ್ರೋಫಿಗೆ ಅರ್ಹರು” ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು.

ಅತ್ತ ವಿಜಯ್ ಮಲ್ಯ ಟ್ವೀಟ್ ಮಾಡುತ್ತಿದ್ದಂತೆ ಇತ್ತ ಅವರ ರಿಪ್ಲೈ ಏನ್ ಇರುತ್ತೆ ಅಂತಾ ಕಾದು ಕೂತಿದ್ದ ಮಂದಿ ಮಲ್ಯ ಕಾಲೆಳೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಕರೆದಿದ್ದಾರೆ. ಆದರೆ ಇದೆಲ್ಲಕ್ಕಿಂತ ಮಜಾ ಅಂದ್ರೆ ಮಲ್ಯ ಟ್ವೀಟ್ ಗೆ SBI ಕೊಟ್ಟಿರುವ ಪ್ರತಿಕ್ರಿಯೆ. “ಸರ್..ಭಾರತಕ್ಕೆ ಬನ್ನಿ. ನಾವೆಲ್ಲ ಒಟ್ಟಾಗಿ ಆರ್‌ಸಿಬಿ ಗೆಲುವನ್ನು ಸಂಭ್ರಮಿಸೋಣ” ಎಂದು ಪ್ರೀತಿಯ ಇಮೋಜಿ ಹಾಕಿ SBI ಹೇಳಿದೆ. ಇದೀಗ ಎಸ್‌ಬಿಐ ಟ್ವೀಟ್‌ನ ಸ್ಕ್ರೀನ್‌ಶಾಟ್‌ನ್ನ ಉದ್ಯಮಿ ಹರ್ಷ ಗೋಯೆಂಕಾ ಶೇರ್ ಮಾಡಿಕೊಂಡಿದ್ದಾರೆ.ಸದ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


