ಮುಂಬೈ; ಗಣೇಶ ಹಬ್ಬದ ಸಂಭ್ರಮದಲ್ಲೇ ರಣವೀರ್ ಸಿಂಗ್ –ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ.ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು (ಸೆ.8) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್ ಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ನಟಿ ದೀಪಿಕಾ ಹೆಣ್ಣ ಮಗುವಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮಗು ಮತ್ತು ದೀಪಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ. ಸೆ.7ರಂದು ಸಂಜೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮನೆಗೆ ಪುಟ್ಟ ಗೌರಿಯ ಆಗಮನವಾಗಿದೆ. ಇನ್ನೂ ದೀಪಿಕಾ ಮತ್ತು ರಣ್‌ವೀರ್ ದಂಪತಿ ಫ್ಯಾನ್ಸ್, ಸ್ಟಾರ್ಸ್ ಶುಭಹಾರೈಸುತ್ತಿದ್ದಾರೆ.
ಇತ್ತೀಚೆಗೆ ನಟಿ ಮಸ್ತ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ಪ್ರೆಗ್ನೆನ್ಸಿ ಮ್ಯಾಟರ್ ಸುಳ್ಳು ಎಂದವರಿಗೆ ಬಂಪ್ ತೋರಿಸಿ ಪತಿ ಜೊತೆ ಕ್ಯಾಮೆರಾಗೆ ದೀಪಿಕಾ ಪೋಸ್ ನೀಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಈ ಮೂಲಕ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ನೀಡಿದ್ದರು.