- Advertisement -
- Advertisement -
ಬೆಂಗಳೂರು: ದಿ. ಲೇಖಕ ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ ಪ್ರಸಿದ್ಧ ಜುಗಾರಿ ಕ್ರಾಸ್ ಕಾದಂಬರಿ ಸಿನಿಮಾ ಆಗುತ್ತಿದೆ.
ನಿರ್ದೇಶಕ ಗುರುದತ್ತ ಗಾಣಿಗ ನಿರ್ದೇಶನದಲ್ಲಿ ಜುಗಾರಿ ಕ್ರಾಸ್ ಸಿನಿಮಾ ಆಗುತ್ತಿದ್ದು, ತೇಜಸ್ವಿ ಅವರ ಜನ್ಮದಿನವಾಗಿರುವ ಇಂದು ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.
ಈ ಹಿಂದೆ ಹಲವು ಬಾರಿ ಜುಗಾರಿ ಕ್ರಾಸ್ ಕಾದಂಬರಿ ಸಿನಿಮಾ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ಸಿನಿಮಾ ಆಗಿರಲಿಲ್ಲ. ಇದೀಗ ಪೂರ್ಣ ಚಂದ್ರ ತೇಜಸ್ವಿಯವರ ಜನ್ಮದಿನದಂದೇ ನಿರ್ದೇಶಕ ಗುರುದತ್ತ ಗಾಣಿಗ ಸಿನಿಮಾ ಘೋಷಣೆ ಮಾಡಿದ್ದಾರೆ.
ಗುರುದತ್ತ ಗಾಣಿಗ ಹಿಂದೆ ದಿ. ಅಂಬರೀಶ್ ಮತ್ತು ಸುದೀಪ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶನ ಮಾಡಿದ್ದು, ಈಗ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಜುಗಾರಿ ಕ್ರಾಸ್ ಸಿನಿಮಾ ಗುರುದತ್ತ ಗಾಣಿಗ ಅವರ ನಿರ್ದೇಶನದ ಮೂರನೇ ಸಿನಿಮಾ ಆಗಿದೆ.
- Advertisement -