Thursday, May 2, 2024
Homeಜ್ಯೋತಿಷ್ಯಭಾನುವಾರದ ರಾಶಿಫಲ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಅಧಿಕ ಲಾಭವಾಗುವ ಸಾಧ್ಯತೆ..

ಭಾನುವಾರದ ರಾಶಿಫಲ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಅಧಿಕ ಲಾಭವಾಗುವ ಸಾಧ್ಯತೆ..

spot_img
- Advertisement -
- Advertisement -

ಮೇಷ: ಮಕ್ಕಳ ವಿವಾಹ ಮಾತುಕತೆಗೆ ಕಾಲ ಕೂಡಿ ಬರುವುದು. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು. ಅನಾರೋಗ್ಯ ಕಾಡೀತು. ಶುಭಸುದ್ದಿ. ಶುಭಸಂಖ್ಯೆ: 4

ವೃಷಭ: ಖಾಸಗಿ ವ್ಯವಹಾರಗಳಲ್ಲಿ ಕಾರ್ಯಸಿದ್ಧಿ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗಳು ಉಂಟಾಗಬಹುದು. ಧನ ನಷ್ಟ. ಶುಭಸಂಖ್ಯೆ: 4

ಮಿಥುನ: ಮಂದಗತಿಯಲ್ಲಿ ಕಾರ್ಯಸಿದ್ದಿ. ಉದ್ದಿಮೆದಾರರಿಗೆ ಪಾಲುದಾರರ ಬಲ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8

ಕಟಕ: ಹಲವು ದಿನಗಳ ಪ್ರಯತ್ನ ಸಫಲ. ನಿರೀಕ್ಷಿಸಿದಂತೆ ಧನ ಲಾಭ. ಕುಟುಂಬದೊಂದಿಗೆ ಮನಸ್ತಾಪ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1

ಸಿಂಹ: ನಂಬಿದವರೇ ಮೋಸ ಮಾಡಿಯಾರು. ಪರಸ್ಥಳ ವಾಸ ಸಂಭವ. ಆಲೋಚಿಸದೆ ತೆಗೆದುಕೊಂಡ ನಿರ್ಣಯಗಳಿಂದ ತೊಂದರೆ. ಶುಭಸಂಖ್ಯೆ: 6

ಕನ್ಯಾ: ಆತ್ಮೀಯರೇ ವಿರೋಧಿಗಳಂತೆ ವರ್ತಿಸಿಯಾರು. ಮಾಡದ ತಪ್ಪಿಗೆ ಕ್ಷಮೆ ಯಾಚಿಸಬೇಕಾದೀತು. ಗೃಹ ನಿರ್ಮಾಣ ಯಶಸ್ವಿ. ಶುಭಸಂಖ್ಯೆ: 7

ತುಲಾ: ಮನಸ್ಸಿನ ಚಾಂಚಲ್ಯದಿಂದ ಕಾರ್ಯ ವಿಫಲ. ಕಷ್ಟಕಾಲದಲ್ಲಿ ಆತ್ಮೀಯರ ಸಹಾಯ. ಸಾರ್ವಜನಿಕ ವಲಯದಲ್ಲಿ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ಪ್ರಾಮಾಣಿಕ ಪ್ರಯತ್ನಕ್ಕೆ ಮನ್ನಣೆ. ಕೆಟ್ಟ ಜನರಿಂದ ದೂರವಿರಿ. ಆಸ್ತಿ ಖರೀದಿ ಯೋಗವಿದೆ. ಭೂ ವ್ಯವಹಾರದಲ್ಲಿ ಧನಲಾಭ. ಶುಭಸಂಖ್ಯೆ: 8

ಧನುಸ್ಸು: ಕೆಲಸ ಕಳೆದುಕೊಳ್ಳುವ ಭೀತಿ. ಆಮಿಷಕ್ಕೆ ಒಳಗಾಗಿ ಮೋಸ ಹೋಗುವ ಸಾಧ್ಯತೆ. ಸಂಗಾತಿಯ ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 6

ಮಕರ: ಕುಟುಂಬದಲ್ಲಿ ವಾಗ್ವಾದ ಬೇಡ. ಉತ್ತಮ ಸಾಧನೆಯಿಂದ ಬಂಧು ವರ್ಗದಲ್ಲಿ ಪ್ರಶಂಸೆ. ವ್ಯವಹಾರ ಕುಶಲತೆ ಲಾಭ ತರುವುದು. ಶುಭಸಂಖ್ಯೆ: 4

ಕುಂಭ: ಉದ್ಯೋಗ ಸಂಬಂಧಿ ಸಮಸ್ಯೆ. ನಿಮ್ಮ ಪರಿಶ್ರಮ ಫಲ ನೀಡುವುದು. ಅಪರಿಚಿತರೊಂದಿಗೆ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 2

ಮೀನ: ವ್ಯಾಪಾರದಲ್ಲಿ ಅಧಿಕ ಲಾಭ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 3

- Advertisement -
spot_img

Latest News

error: Content is protected !!